ಹೊಸ ಮೊಬೈಲ್‌ಫೋನ್ ನೀಡಲು ಆಗ್ರಹ

ron protest
Published on

ರೋಣ: ಅಂಗವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಸುಸಜ್ಜಿತ ಹೊಸ ಮೊಬೈಲ್ ಫೋನ್ ಪೂರೈಸಬೇಕು ಹಾಗೂ ಬಜೆಟ್‌ನಲ್ಲಿ ಘೋಷಿಸಿದಂತೆ 11, 000 ಸಹಾಯಧನ ನೀಡಬೇಕು ಎಂದು ಆಗ್ರಹಿಸಿ ಅಂಗವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಪ್ರತಿಭಟನೆ ನಡೆಸಿದರು.

ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ನೀಲಮ್ಮ ಹಿರೇಮಠ ಮಾತನಾಡಿ, ಸರ್ಕಾರ ಅಂಗನವಾಡಿ ನೌಕರರನ್ನು ನಿರ್ಲಕ್ಷಿಸುತ್ತಿದೆ’ ಎಂದು ದೂರಿದಿರು.

ಸಿಡಿಪಿಒ ಬಸಮ್ಮ ಹೂಲಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸುವರ್ಣಾ ಇಂಡಿ, ಶರಣಮ್ಮ ವಾಲಿ, ಗಂಗಮ್ಮ ಪಾಟೀಲ, ಚನ್ನಮ್ಮ ಕಾಶಣ್ಣವರ, ಸುವರ್ಣಾ ಚಿಗರಿ, ದಾಕ್ಷಾಯಿಣಿ ಗುಂಡೆ, ಗೀತಾ ಪಾಟೀಲ, ಗಂಗಮ್ಮ ದ್ಯಾವರಡ್ಡಿ, ಶಶಿಕಲಾ ಗಾಣಿಗೇರ, ಶೋಭಾ ಭಜಂತ್ರಿ, ಜಯಶ್ರೀ ಮಲಕಸಮುದ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net