

ರಾಮನಗರ: ಲೋಕಾಯುಕ್ತ ಅಧಿಕಾರಿ ಹೆಸರಲ್ಲಿ ಶಿಶುಅಭಿವೃದ್ಧಿ ಯೋಜನಾಧಿಕಾರಿಯೊಬ್ಬರಿಂದ ಹಣಕೀಳಲು ಯತ್ನಿಸಿರುವ ಪ್ರಕರಣವೊಂದು ಐಜೂರುಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ರಾಮನಗರ ಲೋಕಾಯುಕ್ತ ಡಿವೈಎಸ್ ಪಿ ಶಿವಪ್ರಸಾದ್ ಎಂದು ಹೇಳಿಕೊಂಡು , ಮಾಗಡಿ ಸಿಡಿಪಿಓಬಿ.ಎಲ್ ಸುರೇಂದ್ರ ಅವರಿಗೆ ಕರೆ ಮಾಡಿ , ತಮ್ಮವಿರುದ್ಧ ಲೋಕಾಯಕ್ತದಲ್ಲಿ ದೂರು ದಾಖಲಾಗಿದ್ದುತಮ್ಮ ಕಚೇರಿ, ಮನೆ , ಖಾತೆ ಹೊಂದಿರುವ ಬ್ಯಾಂಕ್ಮೇಲೆ ದಾಳಿ ಮಾಡಬೇಕಾಗಿರುತ್ತದೆ ಎಂದುಬೆದರಿಸಿದ್ದಾರೆ.
ನಂತರ ಇದಾವುದೂ ಬೇಡ ಒಳ್ಳೆಯದು ಮಾಡೋಣ , ಹೊರಗಡೆ ವಿಚಾರಣೆ ಮಾಡಿ ಸಿ ರಿಪೋರ್ಟ್ಹಾಕೋಣ ಎಂದು ಹೇಳಿದ್ದಾರೆ. ಸಿ ರಿಪೋರ್ಟ್ಹಾಕಲು 60 ಸಾವಿರ ರೂ ಹಣವನ್ನು ಫೋನ್ ಪೇಮಾಡುವಂತೆ ಹೇಳಿದ್ದಾನೆ. ನನ್ನ ಬಳಿ ಅಷ್ಟೊಂದುಹಣವಿಲ್ಲ ಎಂದು ಸುರೇಂದ್ರ ಹೇಳಿದಾಗ 30 ಸಾವಿರರೂ ಕಳುಹಿಸುವಂತೆ ತಿಳಿಸಿದ್ದಾರೆ .
ಆದರೆ ಕರೆಮಾಡಿರುವ ವ್ಯಕ್ತಿಯ ಮಾತಿನಿಂದ ಅನುಮಾನಗೊಂಡು ರಾಮನಗರ ಲೋಕಾಯುಕ್ ತಕಚೇರಿಗೆ ಬೇಟಿ ಮಾಡಿ ವಿಚಾರಿಸಿದಾಗ , ಪೊಲೀಸರಿಗೆ ದೂರು ನೀಡುವಂತೆ ಸೂಚನೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಡಿವೈಎಸ್ ಪಿ ಹೆಸರಲ್ಲಿ ಕೆರೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುರೇಂದ್ರ ದೂರು ನೀಡಿದ್ದಾರೆ.