ಸಾಲ ಮನ್ನಾ ಮಾಡಲು ಒತ್ತಾಯ

mony
Published on

ಮೈಸೂರು: ಕೋವಿಡ್ ಲಾಕ್‌ಡೌನ್ ಅವಧಿ ಹಾಗೂ ಯಂತ್ರಗಳ ಆಗಮನದಿಂದಾಗಿ ವಿಶ್ವಕರ್ಮ ಸಮುದಾಯ ತೀರಾ ಸಂಕಷ್ಟಕ್ಕೆ ಒಳಗಾಗಿದೆ.

ಸಮುದಾಯದವರಿಗೆ ದುಡಿಯಲು ಕೆಲಸವಿಲ್ಲದೆ, ಮಕ್ಕಳನ್ನು ಓದಿಸಲು, ಜೀವನ ನಿರ್ವಹಣೆಯೂ ಕಷ್ಟವಾಗಿದೆ. ಹೀಗಾಗಿ ವಿಶ್ವಕರ್ಮ ಅಭಿವೃದ್ಧಿ ನಿಗಮ ವಿತರಿಸಿರುವ ಸಾಲ ಮನ್ನಾ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಮನೋಸ್ಥೈರ್ಯ ತುಂಬಬೇಕೆಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾ ಘಟಕದ ಮುಖಂಡ ಎ.ಎನ್.ಸಿದ್ದಪ್ಪಾಜಿ ವಿಶ್ವಕರ್ಮ ಒತ್ತಾಯಿಸಿದ್ದಾರೆ.

ಈ ಸಂಬಂಧ ಮಹಾಸಭಾ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ಅವರ ನೇತೃತ್ವದಲ್ಲಿ ಜ.7ರಂದು ಬೆಳಗ್ಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುತ್ತದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪದಾಧಿಕಾರಿಗಳಾದ ಸಿದ್ದಾಚಾರಿ, ಮಹೇಶ್, ವೆಂಕಟೇಶ್, ಅರ್ಕೇಶಾಚಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net