ಸ್ಮಶಾನಕ್ಕೆ ಸ್ಥಳ ಮಂಜೂರಿಗೆ ಆಗ್ರಹ

HUN-JULY-3-2(DSS MEMORENDUM)
ಸ್ಮಶಾನ ಮಂಜೂರು ಮಾಡಲು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ತಹಸೀಲ್ದಾರ್‌ರಿಗೆ ಮನವಿ ಸಲ್ಲಿಸಿದರು. ನಿಂಗರಾಜ ಮಲ್ಲಾಡಿ, ಕೆಂಪರಾಜು, ಶೇಖರ್, ಹರೀಶ್, ವಸಂತಾ, ಕಣ್ಣಮ್ಮ ಇದ್ದರು.
Published on

ಹುಣಸೂರು: ತಾಲೂಕಿನ ಬಾಚಳ್ಳಿ ರಸ್ತೆಯಲ್ಲಿರುವ ಬಿ.ಆರ್.ಅಂಬೇಡ್ಕರ್ ನಗರಕ್ಕೆ ಒಂದು ಎಕರೆ ಭೂಮಿಯನ್ನು ಸ್ಮಶಾನಕ್ಕಾಗಿ ಮಂಜೂರು ಮಾಡಿಕೊಡಲು ಆಗ್ರಹಿಸಿ ತಹಸೀಲ್ದಾರ್ ಜೆ.ಮಂಜುನಾಥ್ ಅವರಿಗೆ ದಲಿತ ಸಂಘರ್ಷ ಸಮಿತಿ ಸದಸ್ಯರು ಮನವಿ ಸಲ್ಲಿಸಿದರು.

ಗುರುವಾರ ತಹಸೀಲ್ದಾರ್ ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ ಸಮಿತಿ ಸದಸ್ಯರು, ಸ್ಮಶಾನಕ್ಕೆ ಭೂಮಿ ಮಂಜೂರಿಗೆ ಆಗ್ರಹಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ, ಅಂಬೇಡ್ಕರ್ ನಗರದಲ್ಲಿ 33 ಪರಿಶಿಷ್ಟ ದೊಂಬರ ಅಲೆಮಾರಿ ಕುಟುಂಬಗಳು, 40 ಜೇನುಕುರುಬ ಆದಿವಾಸಿ ಕುಟುಂಬಗಳು, 30ಕ್ಕೂ ಹೆಚ್ಚು ಪರಿಶಿಷ್ಟ ಪೌರಕಾರ್ಮಿಕ ಕುಟುಂಬಗಳು ಸೇರಿ ಒಟ್ಟು 100ಕ್ಕೂ ಹೆಚ್ಚು ಕುಟುಂಬಗಳು ಹಲವು ವರ್ಷಗಳಿಂದ ವಾಸ ಮಾಡುತ್ತಿವೆ. ಮೃತಪಟ್ಟವರ ಸಂಸ್ಕಾರಕ್ಕೆ ಸ್ಮಶಾನ ಇಲ್ಲದೆ ತುಂಬಾ ತೊಂದರೆ ಪಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ಸಮಿತಿಯು ಹಲವು ವರ್ಷಗಳಿಂದ ಅಂಬೇಡ್ಕರ್ ನಗರಕ್ಕೆ ಪ್ರತ್ಯೇಕವಾಗಿ ಸ್ಮಶಾನ ಮಂಜೂರು ಮಾಡುವಂತೆ ಮನವಿ ಮಾಡುತ್ತಾ ಬರುತ್ತಿದ್ದೇವೆ. ಅಲೆಮಾರಿ ನಿಗಮದ ಅಧ್ಯಕ್ಷರಾದ ಪಲ್ಲವಿ ಗ್ರಾಮಕ್ಕೆ ಭೇಟಿ ನೀಡಿದಾಗ ಗ್ರಾಮಸ್ಥರ ಮನವಿ ಮೇರೆಗೆ ಕೂಡಲೇ 1ಎಕರೆ ಸ್ಮಶಾನವನ್ನು ಮಂಜೂರು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೂ ಸ್ಮಶಾನ ಮಂಜೂರಾಗದೆ ಗ್ರಾಮದ ನಿರ್ಗತಿಕ ಅಲೆಮಾರಿ ಜನರಿಗೆ ತೊಂದರೆಯಾಗಿರುತ್ತದೆ. ಅಂಬೇಡ್ಕರ್ ನಗರದ ವಾಸಿಗಳಿಗೆ ಸ್ಮಶಾನಕ್ಕಾಗಿ ಮಂಜೂರು ಮಾಡಿಕೊಡುವಂತೆ ಆಗ್ರಹಿಸಿದರು.

ಮನವಿ ಸ್ವೀಕರಿಸಿ ತಹಸೀಲ್ದಾರ್ ಮಂಜುನಾಥ್, ಅಕ್ಕಪಕ್ಕದ ಜಾಗವನ್ನು ಪರಿಶೀಲಿಸಿ ಕೂಡಲೇ ವರದಿ ಸಲ್ಲಿಸುವಂತೆ ಸ್ಥಳದಲ್ಲಿದ್ದ ಕಸಬಾ ರಾಜಸ್ವ ನಿರೀಕ್ಷಕ ಶ್ರೀಧರ್ ಅವರಿಗೆ ಸೂಚಿಸಿದರು.

ದಸಂಸದ ದೇವೇಂದ್ರ ಕುಳುವಾಡಿ, ಕಿರಿಜಾಜಿ ಗಜೇಂದ್ರ, ಮಲ್ಲಿಕ್ ಪಾಷಾ, ಅಂಬೇಡ್ಕರ್ ನಗರದ ಗ್ರಾಮಸ್ಥರಾದ ಶೇಖರ, ಹರೀಶ, ಸುರೇಶ, ವೆಂಕಟೇಶ, ರಾಮಚಂದ್ರ, ಆದಿವಾಸಿ ಮುಖಂಡರಾದ ವಸಂತಾ, ಕಣ್ಣಮ್ಮ, ಮಂಜುಳಾ, ಶೋಭಮ್ಮ, ಕಿಟ್ಟಮ್ಮ, ವೇಣುಗೋಪಾಲ, ಕುಮಾರ, ದಾಸಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net