ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ತನಿಖೆಗೆ ಆಗ್ರಹ

gan-5
Published on

ಕುಂದಾಪುರ: ಇಲ್ಲಿನ ಎಪಿಎಂಸಿಯಿಂದ ಗೋವಾ ಗಡಿಯ ತನಕ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾಮಗಾರಿಯಿಂದ ನಿತ್ಯವೂ ಸಮಸ್ಯೆಗಳಾಗುತ್ತಿವೆ. ಯೋಜನೆಗಳ ನ್ಯೂನತೆ ಹಾಗೂ ಸ್ಥಿತಿಗತಿ ಅಧ್ಯಯನ ಮಾಡಲು ಉನ್ನತ ತಾಂತ್ರಿಕ ಸಮಿತಿ ರಚಿಸುವಂತೆ ವಕೀಲ ಕೆ.ಸಿ.ಶೆಟ್ಟಿ ಆ್ಯಂಡ್ ಅಸೋಸಿಯೇಟ್ ವತಿಯಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ.

ಐಆರ್‌ಬಿ ಇನ್‌ಫ್ರಾಸ್ಟ್ರಕ್ಚರ್ ಡೆವಲಪರ್ಸ್ ಲಿಮಿಟೆಡ್ ಸಂಸ್ಥೆ ಕಾಮಗಾರಿ ಗುತ್ತಿಗೆ ನಿರ್ವಹಿಸಿದ್ದು, ಇದರಿಂದ ನಿರಂತರ ಸಮಸ್ಯೆ ಉಂಟಾಗುತ್ತಿದೆ. ದುರ್ಬಲ ವಲಯಗಳಲ್ಲಿ ಮೋರಿ ನಿರ್ವಾಣ, ಬೀದಿ ದೀಪಗಳ ಅಳವಡಿಕೆ ಮತ್ತು ಪ್ರವಾಹತಡೆಗಟ್ಟುವ ಮೂಲಸೌಕರ್ಯಗಳನ್ನು ತಕ್ಷಣ ನಿರ್ಮಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

ಐಆರ್‌ಬಿ ಸಂಸ್ಥೆ 2012ರಲ್ಲಿ ಕಾಮಗಾರಿ ಆರಂಭಿಸಿದ್ದು, ದಶಕಕ್ಕೂ ಹೆಚ್ಚು ಸಮಯ ಕಳೆದರೂ ಕಾಮಗಾರಿ ಅಪೂರ್ಣವಾಗಿಯೇ ಉಳಿದಿದೆ. ಕಾಮಗಾರಿಗಳು ನಡೆದ ಪ್ರದೇಶಗಳು ಅಪಘಾತ ವಲಯಗಳಾಗಿವೆ. ಈ ಹಿನ್ನೆಲೆಯಲ್ಲಿ ತಜ್ಞರಿಂದ ಅಧ್ಯಯನ ನಡೆಸಿ ವರದಿ ಪಡೆದು ಮೂಲಯೋಜನೆಯಂತೆ ಕಾಮಗಾರಿ ನಿರ್ವಹಿಸಲು ನಿರ್ದೇಶಿಸಕಬೇಕೆಂದು ಮನವಿಯಲ್ಲಿ ವಕೀಲ ಕೆ.ಸಿ.ಶೆಟ್ಟಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net