ಅವ್ಯವಹಾರ ತನಿಖೆಗೆ ಆಗ್ರಹ

3 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಬಿಜೆಪಿ ಸರ್ಕಾರದ ಅವಧಿಯ ಕರೊನಾ ಸಮಯದಲ್ಲಿ ಆಗಿರುವ ಅವ್ಯವಹಾರ ಕುರಿತು ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಧಾರವಾಡ-71 ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ರಾಜ್ಯದಲ್ಲಿ ಕರೊನಾ ಇದ್ದ ಸಮಯದಲ್ಲಿ ಬಿಜೆಪಿ ಆಡಳಿತದಲ್ಲಿತ್ತು. ಆಗ ಕರೊನಾ ನಿರ್ವಹಣೆಯಲ್ಲಿ ವೈದ್ಯಕೀಯ ಸಲಕರಣೆ ಖರೀದಿ ಮತ್ತು ಇತರ ಸೇವೆ ಒದಗಿಸುವ ಹಂತದಲ್ಲಿ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿರುವ ಸಾಧ್ಯತೆ ಇದೆ. ಈ ಕುರಿತು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಹ ಬಹಿರಂಗ ಆರೋಪ ಮಾಡಿದ್ದಾರೆ. ಹೀಗಾಗಿ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಅವ್ಯವಹಾರ ನಡೆಸಿ ಸಾರ್ವಜನಿಕರ ಹಣ ಲೂಟಿ ಮಾಡಿರುವ ಸಚಿವರ, ಶಾಸಕರ ಮತ್ತು ಅಧಿಕಾರಿಗಳನ್ನು ಸೂಕ್ತ ತನಿಖೆಗೆ ಒಳಪಡಿಸಬೇಕು. ಈ ಬಗ್ಗೆ ಸಾರ್ವಜನಿಕರಿಗೆ ಸತ್ಯ ತಿಳಿಸುವ ಅಗತ್ಯವಿದೆ. ಈ ದಿಸೆಯಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕ ಮನವಿಪತ್ರ ರವಾನಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಶಿವಳ್ಳಿ, ಸುರೇಶಗೌಡ ಕರಿಗೌಡ್ರ, ಅರವಿಂದ ಏಗನಗೌಡರ, ಮಲ್ಲನಗೌಡ ಪಾಟೀಲ, ಸಿದ್ದಪ್ಪ ಪ್ಯಾಟಿ, ಪಾರ್ಶ್ವನಾಥ ಪತ್ರಾವಳಿ, ಸಿದ್ದಪ್ಪ ಸಪೂರಿ, ಮಡಿವಾಳಪ್ಪ ಉಳವಣ್ಣವರ, ಚನ್ನಬಸಪ್ಪ ಮಟ್ಟಿ, ಇಮ್ರಾನ ಕಳ್ಳಿಮನಿ, ಅಶೋಕ ದೊಡ್ಡಮನಿ, ನೇತಾಜಿ ಪಾಟೀಲ, ಮಡಿವಾಳಪ್ಪ ದಿಂಡಲಕೊಪ್ಪ, ಆತ್ಮಾನಂದ ಅಂಗಡಿ, ಪರಮೇಶ್ವರ ಕಾಳೆ, ಭೀಮಪ್ಪ ಕಾಸಾಯಿ, ವೆಂಕಟೇಶ ಸಗಬಾಲ್, ಆನಂದ ಸಿಂಗನಾಥ, ಕರೆಪ್ಪ ಮಾದರ, ಬಸವರಾಜ ಜಾಧವ, ಹನಮಂತ ಮಾರಡಗಿ, ಪ್ರಕಾಶ ದೊಡವಾಡ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net