ಬೀದಿ ದೀಪಗಳ ಅಳವಡಿಕೆಗೆ ಆಗ್ರಹ

8 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಇಲ್ಲಿನ ಲಕಮನಹಳ್ಳಿಯ ಶಿವಾಜಿನಗರದಲ್ಲಿ ಬೀದಿ ದಿಪಗಳು ಇಲ್ಲದೆ ರಾತ್ರಿಯಲ್ಲಿ ಕತ್ತಲಲ್ಲೇ ಓಡಾಡುವಂತಾಗಿದೆ. ಬೀದಿ ದೀಪಗಳ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಜನರು ದೂರಿದ್ದಾರೆ.

ಶಿವಾಜಿನಗರದಲ್ಲಿನ ಒಂದು ರಸ್ತೆಗೂ ದೀಪ ಅಳವಡಿಕೆ ಮಾಡಿಲ್ಲ. ಹೀಗಾಗಿ ಜನರು ಕತ್ತಲಿನಲ್ಲೇ ಓಡಾಡುವಂತಾಗಿದೆ. ಈಗಾಗಲೇ ಸಂಪೂರ್ಣ ಹಾಳಾಗಿರುವ ರಸ್ತೆಯಲ್ಲಿ ಹಗಲಿನಲ್ಲೇ ಓಡಾಡುವುದು ಕಷ್ಟ. ಇಂತಹ ಸ್ಥಿಯಲ್ಲಿ ರಾತ್ರಿಯಂತೂ ಹೇಳ ತೀರದು. ಬಹುತೇಕ ಜನರು ರಾತ್ರಿ ಸಮಯದಲ್ಲಿ ಬಿದ್ದು ಗಾಯ ಸಹ ಮಾಡಿಕೊಂಡಿದ್ದಾರೆ.

ಬಡಾವಣೆಯಲ್ಲಿ ಬೀದಿ ದೀಪ ಅಳವಡಿಕೆ ಜತೆಗೆ ರಸ್ತೆಗಳ ದುರಸ್ತಿ, ಗಟಾರು ನಿರ್ಮಾಣ ಮಾಡುವಂತೆ ಪಾಲಿಕೆ ಸದಸ್ಯರು ಸೇರಿ ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಟೆಂಡರ್​ ಕರೆಯಲಾಗಿದೆ. ಕೂಡಲೇ ಅಳವಡಿಕೆ ಮಾಡಲಾಗುವುದು ಎಂದು ಹೇಳುತ್ತೇಲೆ ವರ್ಷಗಟ್ಟಲೇ ಕಾಲ ಹರಣ ಮಾಡಿದ್ದಾರೆ. ಇನ್ನಾದರೂ ಪಾಲಿಕೆ ಅಧಿಕಾರಿಗಳು ಬೀದಿ ದೀಪಗಳನ್ನು ಅಳವಡಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಬಡಾವಣೆ ನಿವಾಸಿ ರಂಗನಾಥ ಜೋಶಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net