ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆಗೆ ಆಗ್ರಹ

New Gandagalekar New
Published on

ಹುಬ್ಬಳ್ಳಿ : ಶಿವ ಜಯಂತಿ ದಿನವಾದ ಏಪ್ರಿಲ್ 29ರಂದು ಮಹಾನಗರ ಪಾಲಿಕೆಯಿಂದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯನ್ನು ನಗರದಲ್ಲಿ ಪ್ರತಿಷ್ಠಾಪಿಸುವಂತೆ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನಾ ಹೋರಾಟ ಸಮಿತಿ ಆಗ್ರಹಿಸಿದೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಕಾರ್ಯಾಧ್ಯಕ್ಷ ಕೃಷ್ಣಾ ಗಂಡಗಾಳೇಕರ, ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ತಯಾರಿಕೆಯ ಕಾರ್ಯವನ್ನು ಕೊಲ್ಹಾಪುರದ ಕಲಾಕಾರರಿಗೆ ಮಹಾನಗರ ಪಾಲಿಕೆ ನೀಡಿತ್ತು. ಈಗಾಗಲೇ ಮೂರ್ತಿ ಸಿದ್ಧಗೊಂಡಿದೆ ಎಂದು ತಿಳಿಸಿದರು.

ಒಟ್ಟು 25 ಲಕ್ಷ ರೂ.ಗೆ ಮೂರ್ತಿ ತಯಾರಿಕೆಯ ಕೆಲಸ ನೀಡಲಾಗಿತ್ತು. ಇದರಲ್ಲಿ ಇನ್ನೂ 4.50 ಲಕ್ಷ ರೂ. ಬಾಕಿ ಹಣವನ್ನು ಪಾಲಿಕೆ ನೀಡಬೇಕಿದೆ. ಪಾಲಿಕೆ ಬಾಕಿ ಹಣವನ್ನು ಮೂರ್ತಿ ತಯಾರಕರಿಗೆ ತಕ್ಷಣ ನೀಡಿ, ಮೂರ್ತಿ ತರಿಸಬೇಕು. ಇಲ್ಲದಿದ್ದರೆ ಸಮಾಜದವರೆಲ್ಲ ಸೇರಿ ಬಾಕಿ ಹಣವನ್ನು ಮೂರ್ತಿ ಕಲಾವಿದರಿಗೆ ನೀಡಿ, ಮೂರ್ತಿ ತರುತ್ತೇವೆ ಎಂದು ಹೇಳಿದರು. ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಿರಕೋಳ, ರವಿ ನಾಯ್ಕ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net