ಅಂಗನವಾಡಿ ಕಾರ್ಯಕರ್ತೆಯ ಗೌರವಧನ ಹೆಚ್ಚಳಕ್ಕೆ ಒತ್ತಾಯ

D.21-MDG-1P1 (2)
ಗೌರವಧನ ಹೆಚ್ಚಳಕ್ಕೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಶಾಸರ ಕಚೇರಿ ಎದುರು ಪ್ರತಿಭಟನೆ ನಡೆಸಿ ಮಾಜಿ ಸಚಿವೆ ಮೋಟಮ್ಮಗೆ ಮನವಿ ಸಲ್ಲಿಸಿದರು. ಕೆ.ಆರ್.ಶೈಲಾ, ವನಜಾಕ್ಷಿ, ದೀಪಿಕಾ, ಗೌರಿ, ಶೋಭಾ ಇದ್ದರು.
Published on

ಮೂಡಿಗೆರೆ: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವಧನ ಹೆಚ್ಚಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಸದಸ್ಯರು ಬುಧವಾರ ಶಾಸಕರ ಕಚೇರಿ ಎದುರು ಪ್ರತಿಭಟನೆ ನಡೆಸಿ ಮಾಜಿ ಸಚಿವೆ ಮೋಟಮ್ಮ ಅವರಿಗೆ ಮನವಿ ಸಲ್ಲಿಸಿದರು. ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಅವರು 6ನೇ ಗ್ಯಾರಂಟಿಯಾಗಿ ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು 15 ಸಾವಿರ ರೂ. ಮತ್ತು ಸಹಾಯಕಿಯರಿಗೆ 10 ಸಾವಿರ ರೂ ಹೆಚ್ಚಿಸಲಾಗುವುದು ಹಾಗೂ ನಿವೃತ್ತಿ ಹೊಂದಿದವರಿಗೆ 3 ಲಕ್ಷ ಇಡುಗಂಟು ನೀಡುವ ಭರವಸೆ ನೀಡಲಾಗಿತ್ತು. ಆದರೆ ಆದನ್ನು ಜಾರಿ ಮಾಡಿಲ್ಲ. ಶಾಸಕರು ಮುಖ್ಯಮಂತ್ರಿಗಳ ಗಮನ ಸೆಳೆದು ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ. ಸಂಘದ ಅಧ್ಯಕ್ಷೆ ಕೆ.ಆರ್.ಶೈಲಾ, ಪ್ರಧಾನ ಕಾರ್ಯದಿರ್ಶಿ ವನಜಾಕ್ಷಿ, ದೀಪಿಕಾ, ಗೌರಿ, ಶೋಭಾ, ಸತ್ಯಾ, ರಮ್ಯಾ, ಅಶ್ವಿನಿ, ಶಿಲ್ಪ್ಪಾ, ವೀಣಾ ಅನ್ನಪೂರ್ಣ, ಗೌರಮ್ಮ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net