

ಪಾವಗಡ: ಒಳ ಮೀಸಲಾತಿ ಜಾರಿಗೆ ತರುವಂತೆ ಒತ್ತಾಯಿಸಿ ಮಾದಿಗ ಸಮುದಾಯದ ವಿವಿಧ ಸಂಘ&-ಸಂಸ್ಥಗಳಿಂದ ಶುಕ್ರವಾರ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಅರೆ ಬೆತ್ತಲೆ ಪ್ರತಿಭಟಿಸಿದರು.
ಡಿಎಸ್ಎಸ್ ಜಿಲ್ಲಾ ಸಂಚಾಲಕ ಸಿ.ಕೆ ತಿಪ್ಪೇಸ್ವಾಮಿ ಮಾತನಾಡಿ, ನಮ್ಮ ಸಂವಿಧಾನಿಕ ಹಕ್ಕಿಗಾಗಿ ಕಳೆದ 3 ದಶಕಗಳಿಂದ ಹೋರಾಟ ಸೇರಿ ವಿವಿಧ ಪ್ರತಿಭಟನೆ ನಡೆಸುತ್ತಾ ಬಂದಿದ್ದು, ಇದರ ಪ್ರತಿಫಲವಾಗಿ ಸುಪ್ರೀಂ ಕೋರ್ಟ್ 2024ರ ಆ.1ರಂದು ಒಳ ಮೀಸಲಾತಿ ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡಿದ್ದರು. ಅದರಂತೆ ನೆರೆಯ ಆಂಧ್ರ ಮತ್ತು ತೆಲಾಂಗಣ ರಾಜ್ಯದಲ್ಲಿ ಒಳ ಮೀಸಲಾತಿ ಜಾರಿ ಮಾಡಲಾಗಿದೆ. ಕರ್ನಾಟಕದಲ್ಲಿ ಕೋಟ್ಯಾಂತರ ರೂಪಾಯಿ ವ್ಯಯಿಸಿ ಕಾಂತ ರಾಜ್ ವರಧಿ, ನಾಗಮೋಹನ್ ದಾಸ್ ಆಯೋಗ ರಚಿಸಿ ಜಾತಿ ಸಮಿಕ್ಷೆ ನಡೆಸಿದೆ, ಆದರೂ ಸಹ ಜಾರಿಗೆ ಯಾಕೆ ಮಾಡುತ್ತಿಲ್ಲವೆಂದು ಪ್ರಶ್ನಿಸಿದರು.
ಸುಪ್ರೀಂ ಕೊರ್ಟ್ ಆದೇಶಿಸಿ ಒಂದು ವರ್ಷ ಕಳೆದರೂ ಅನೇಕ ನೆಪಗಳನ್ನೊಡ್ಡಿ ಒಳ ಮೀಸಲಾತಿ ಜಾರಿ ಮಾಡಲು ರಾಜ್ಯದಲ್ಲಿರುವ ಸಿದ್ದರಾಮಯ್ಯನ ಕಾಂಗ್ರೆಸ್ ಸರ್ಕಾರ ವಿಳಂಬ ಮಾಡುತ್ತಿದೆ. ಆ.16ರಂದು ಒಳ ಮಿಸಲಾತಿ ಸಂಪುಟ ಸಭೆಯನ್ನು ವಿನಾಕಾರಣ ನೆಪವೊಡ್ಡಿ ಮುಂದುಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಾ ಆದಿಗ ದಂಡೋರ ಅಧ್ಯಕ್ಷ ಕನ್ನಮೇಡಿ ಕೃಷ್ಣಮೂರ್ತಿ ಮಾತನಾಡಿ, ಇಂದು ದೇಶವೆಲ್ಲಾ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ. ಆದರೆ ನನ್ನ ಸಮುದಾಯಕ್ಕೆ ದಾಸ್ಯದಿಂದ ಬಿಡುಗಡೆಯೂ ಇಲ್ಲ, ಸ್ವಾತಂತ್ರ್ಯವೂ ಸಿಕ್ಕಿಲ್ಲ. ಇಂದಿಗೂ ಬಂಡವಾಳ ಶಾಹಿಗಳ, ಶ್ರೀಮಂಥ, ಜಮೀನ್ ದಾರರ ಜೊಲ ಗದ್ದೆಗಳಲ್ಲೇ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರಾದ ಮಂಜುನಾಥ್, ಬ್ಯಾಡನೂರು ಶಿವಶಂಕರಪ್ಪ, ಉಗ್ರಪ್ಪ, ಪ್ರಸಾದ್ ಬಾಬು, ಮಲ್ಲಿಕಾರ್ಜುನ, ಮೂರ್ತಿ, ಹೊನ್ನೂರಪ್ಪ, ಕೃಷ್ಣಮೂರ್ತಿ, ಲತಾ, ಗೀತಾ, ಗಂಗಮ್ಮ, ಭೂಲಕ್ಷ$್ಮಮ್ಮ ಇದ್ದರು.