ಆಸ್ಪತ್ರೆ ಅಭಿವೃದ್ಧಿ ಆಗ್ರಹಿಸಿ ಧರಣಿ

yathre
Published on

ಉಪ್ಪಳ: ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ಕೆ.ಐ.ಎಫ್.ಬಿ.(ಕಿಪ್ಭಿ)ಮೀಸಲಿಟ್ಟಿರುವ ನಿಧಿಯಿಂದ ಕಟ್ಟಡ ನಿರ್ಮಾಣ ಆರಂಭಿಸಬೇಕು ಎಂದು ಆಗ್ರಹಿಸಿ ಎನ್.ಸಿ. ಪಿ(ಎಸ್) ಮಂಜೇಶ್ವರ ಬ್ಲಾಕ್ ಸಮಿತಿ ನೇತೃತ್ವದಲ್ಲಿ ಆಸ್ಪತ್ರೆ ಆವರಣದಲ್ಲಿ ಧರಣಿ ನಡೆಯಿತು. ಜಿಲ್ಲಾಧ್ಯಕ್ಷ ಕರೀಂ ಚಂದೇರ ಉದ್ಘಾಟಿಸಿ ಮಾತನಾಡಿ, ಆಸ್ಪತ್ರೆ ನಿರ್ಮಾಣ ಆರಂಭಿಸುವಲ್ಲಿ ಶಾಸಕ ಹಾಗೂ ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸಂಪೂರ್ಣ ವಿಫಲವಾಗಿದ್ದು, ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು. ಸಚಿವರ ಮಧ್ಯಸ್ಥಿಕೆಯಿಂದ ಕಟ್ಟಡವನ್ನು ನನಸಾಗಿಸಲು ಪಕ್ಷವು ಪ್ರಯತ್ನಿಸುತ್ತದೆ ಎಂದು ಭರವಸೆ ನೀಡಿದರು.

ಬ್ಲಾಕ್ ಅಧ್ಯಕ್ಷ ಮಹ್ಮದ್ ಕೈಕಂಬ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಸಿ.ಬಾಲನ್, ಜಿಲ್ಲಾ ಉಪಾಧ್ಯಕ್ಷ ರಾಜು ಕೋಯನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ನಾರಾಯಣನ್, ಉದಿನೂರು ಸುಕುಮಾರನ್, ಜುಬೇರ್ ಪಡ್ಪು, ಸಿದ್ದಿಕ್ ಕೈಕಂಬ, ಸೀನತ್ ಸತೀಶನ್, ಅಲ್ಪಸಂಖ್ಯಾತ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಮೀದ್ ಚೇರಂಗೈ, ಮಹಮ್ಮದ್ ಆನೆಬಾಗಿಲು, ಎನ್.ಎಂ.ಸಿ ಜಿಲ್ಲಾಧ್ಯಕ್ಷೆ ಖದೀಜಾ ಮೊಗ್ರಾಲ್ ಮಾತನಾಡಿದರು.

ಬ್ಲಾಕ್ ಮತ್ತು ಮಂಡಲ ಪದಾಧಿಕಾರಿಗಳಾದ ಅಶ್ರಫ್ ಪಚ್ಲಂಪಾರೆ, ಅಬ್ದುಲ್ ರೆಹಮಾನ್ ಹಾಜಿ, ಸುರೇಂದ್ರನ್ ಉಪ್ಪಳ, ಇಬ್ರಾಹಿಂ ಹಾಜಿ, ನಾಸರ್ ಉಪ್ಪಳ, ಹರೀಶ್ ಕುಮಾರ್, ಜಮೀಲಾ ಹಮೀದ್, ತಾಹಿರಾ ಕೋಡಿಬೈಲ್, ರಿಝ್ವನಾ ಫಿರ್ದೌಸ್ ನಗರ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net