

ಹುಬ್ಬಳ್ಳಿ : ಹೊಸಪೇಟ ಸುತ್ತಲಿನ ಜನರು ಎದುರಿಸುತ್ತಿರುವ ರೈಲ್ವೆ ಸೌಲಭ್ಯದ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ವಿಜಯನಗರ ರೈಲ್ ಪ್ಯಾಸೆಂಜರ್ಸ್ ಆ್ಯಂಡ್ ಟೆಲಿಕಾಮ್ ಯೂಸರ್ಸ್ ವೆಲ್ೇರ್ ಅಸೋಸಿಯೇಶನ್ ಪದಾಧಿಕಾರಿಗಳು ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಮುಕುಲ ಸರನ ಮಾಥುರ ಅವರನ್ನು ಆಗ್ರಹಿಸಿದ್ದಾರೆ.
ವಾರದ ಎಲ್ಲ ದಿನ ಸಂಚರಿಸುತ್ತಿದ್ದ ಬೆಳಗಾವಿ-ಹೈದ್ರಾಬಾದ್-ಮಂಗಳೂರು ರೈಲು ಸಂಚಾರವನ್ನು ಕುಂಭಮೇಳದಿಂದಾಗಿ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿತ್ತು. ಆದರೆ, ಕುಂಭಮೇಳ ಮುಗಿದರೂ ಈ ರೈಲು ಸಂಚಾರ ಪುನರಾರಂಭಗೊಂಡಿಲ್ಲ. ಈ ರೈಲು ಸಂಚಾರ ಹೊಸಪೇಟ ಸುತ್ತಲಿನ ಪ್ರದೇಶದ ಜನರಿಗೆ ಬಹುಮುಖ್ಯವಾಗಿತ್ತು. ಬೆಳಗ್ಗೆ 8 ಗಂಟೆ ನಂತರ ಹುಬ್ಬಳ್ಳಿ&ಬೆಳಗಾವಿನತ್ತ ಪ್ರಯಾಣಿಸುವವರಿಗೆ ಬೇರೆ ರೈಲು ಸೌಲಭ್ಯ ಇಲ್ಲದಂತಾಗಿದೆ.
ಹೊಸಪೇಟ-ಬಳ್ಳಾರಿ-ಕೊಪ್ಪಳ ಪ್ರದೇಶದಲ್ಲಿ ಕೈಗಾರಿಕೆಗಳು ಹೆಚ್ಚು ಇವೆ. ಬಹಳಷ್ಟು ಜನರು ವಿಮಾನಕ್ಕಾಗಿ ಹೈದ್ರಾಬಾದ್ಗೆ ತಲುಪಲು ಹಾಗೂ ಇನ್ನಿತರ ನಗರಗಳಿಗೆ ಸಂಚರಿಸಲು ಈ ರೈಲು ಬಹಳ ಮುಖ್ಯವಾಗಿತ್ತು.
ಹುಬ್ಬಳ್ಳಿ&ಚೆನೈ ರೈಲು ವಾರದಲ್ಲಿ ಬುಧವಾರ ಮತ್ತು ಶುಕ್ರವಾರ ಮಾತ್ರ ಸಂಚರಿಸುತ್ತದೆ. ಈ ರೈಲನ್ನು ನಿತ್ಯ ಓಡಿಸಬೇಕೆಂಬ ಬೇಡಿಕೆ ಆಂದ್ರಪ್ರದೇಶ, ತಮಿಳುನಾಡು ಮತ್ತು ಕೇರಳ ಜನರದ್ದು.
ಹೊಸಪೇಟ-ಗದಗ ಮಾರ್ಗವಾಗಿ ಸಂಚರಿಸುವ ಮೈಸೂರು-ಶಿರಡಿ ವಾರದಲ್ಲಿ ಒಂದು ದಿನ ಮಾತ್ರ ಸಂಚರಿಸುತ್ತದೆ. ಈ ರೈಲಿಗೆ ಪ್ರಯಾಣಿಕರ ಬೇಡಿಕೆ ಸಾಕಷ್ಟು ಇದ್ದು, ಕನಿಷ್ಠ ವಾರದಲ್ಲಿ ಮೂರು ದಿನವಾದರೂ ಸಂಚರಿಸುವಂತೆ ಮಾಡಬೇಕು.
ವಿಶ್ವಪ್ರಸಿದ್ಧ ಪ್ರವಾಸಿ ತಾಣ ಹಂಪಿ ವೀಕ್ಷಣೆಗೆ ವಿದೇಶ, ದೇಶ ಹಾಗೂ ರಾಜ್ಯದ ವಿವಿಧೆಡೆಯಿಂದ ನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ಹಾಗಾಗಿ, ಬೆಂಗಳೂರು&ಹೊಸಪೇಟ ಜಂಕ್ಷನ್ ಮಧ್ಯೆ ವಂದೇ ಭಾರತ್ ರೈಲು ಸಂಚಾರ ಪ್ರಾರಂಭಿಸಬೇಕು.
ಯಶವಂತಪುರ- ಬಾರ್ಮರ್ ಎಕ್ಸ್ಪ್ರೆಸ್ ರೈಲು ಹುಬ್ಬಳ್ಳಿ ಮಾರ್ಗವಾಗಿ ವಾರದಲ್ಲಿ ಒಂದು ದಿನ ಮಾತ್ರ ಸಂಚರಿಸುತ್ತದೆ. ಮಹಾರಾಷ್ಟ್ರ, ಗುಜರಾತ, ರಾಜಸ್ಥಾನದ ಪ್ರಯಾಣಿಕರಿಂದ ಈ ರೈಲು ತುಂಬಿರುತ್ತದೆ. ಈ ರೈಲಿನ ಸೌಲಭ್ಯ ಕರ್ನಾಟಕದ ಜನರಿಗೆ ಹೆಚ್ಚು ಸಿಗಬೇಕು. ಇದಕ್ಕಾಗಿ, ಹುಬ್ಬಳ್ಳಿ, ಮಿರಜ್ ಮಾರ್ಗವಾಗಿ ವಾರದಲ್ಲಿ ನಾಲ್ಕು ದಿನ ಹಾಗೂ ವಾರದಲ್ಲಿ ಮೂರು ದಿನ ಬಳ್ಳಾರಿ, ಹೊಸಪೇಟ, ಗದಗ, ವಿಜಯಪುರ ಮಾರ್ಗವಾಗಿ ಈ ರೈಲು ಸಂಚರಿಸುವಂತಾಗಬೇಕು.
ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಹುಬ್ಬಳ್ಳಿ ಮಾರ್ಗವಾಗಿ ನಿತ್ಯ ಸಂಚರಿಸುತ್ತಿದೆ. ಈ ರೈಲು ವಾರದಲ್ಲಿ ಮೂರು ದಿನ ಹೊಸಪೇಟ-ದಾವಣಗೆರೆ ಮೂಲಕ ಸಂಚರಿಸಬೇಕು.
ಹೊಸಪೇಟ-ಮುಂಬೈ ಸಿಎಸ್ಎಂಟಿ ರೈಲಿನ ಬೋಗಿಗಳನ್ನು ಎಲ್ಎಚ್ಬಿ ಬೋಗಿಗಳಾಗಿ ಪರಿವತಿರ್ಸಬೇಕು ಹಾಗೂ ಬೋಗಿಗಳ ಸಂಖ್ಯೆ ಹೆಚ್ಚಿಸಬೇಕು.
ಮದುವೆ ಸಮಾರಂಭ, ಬೇಸಿಗೆ ರಜೆ, ಹಬ್ಬಗಳ ಹಿನ್ನೆಲೆಯಲ್ಲಿ ಮೈಸೂರು-ಹುಬ್ಬಳ್ಳಿ-ಜೋಧಪುರ ಸ್ಪೇಷಲ್ ರೈಲು ಸಂಚಾರವನ್ನು ಜುಲೈವರೆಗೆ ವಿಸ್ತರಿಸಬೇಕು. ಹೊಸಪೇಟ ರೈಲು ನಿಲ್ದಾಣದಲ್ಲಿನ ಪ್ಲಾಟ್ಾಮ್ರ್ಗಳ ಸಂಖ್ಯೆ ಹೆಚ್ಚಿಸಬೇಕು.
ಈ ಎಲ್ಲ ಬೇಡಿಕೆಗಳನ್ನು ಇತ್ತೀಚೆಗೆ ನಡೆದ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿಯೂ ಮಂಡಿಸಿದ್ದು, ಶ್ರೀ ಈಡೇರಿಸುವಂತೆ ಅಸೋಸಿಯೇಶನ್ನ ಅರ್ಧಯಕ್ಷ ಬಾಬುಲಾಲ್ ಜೈನ್, ಉಪಾಧ್ಯಕ್ಷ ಪುಕುರಾಜ ಚೋಪ್ರಾ, ಕಾರ್ಯದಶಿರ್ ಅಶೋಕ ಜೆರೆ ಹಾಗೂ ಮತ್ತಿತರರು ಆಗ್ರಹಿಸಿದ್ದಾರೆ.