ದೇಗುಲ ಅಭಿವೃದ್ಧಿಗೆ ಅನುದಾನಕ್ಕೆ ಬೇಡಿಕೆ

mla rrr
ಕರುಗುಂದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಜೀರ್ಣೊದ್ಧಾರ ಸಮಿತಿಯಿಂದ ಶಾಸಕ ಟಿ.ಡಿ.ರಾಜೇಗೌಡ ಹಾಗೂ ಮಾಜಿ ಎಂಎಲ್ಸಿ ಎಂ.ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು. ಪಿ.ಆರ್.ಸದಾಶಿವ, ಗೇರ್‌ಬೈಲ್ ನಟರಾಜ್, ಕೆ.ಸಿ.ಜಗದೀಶ್, ಭಾರತಿ, ವಾಣಿ ಇತರರಿದ್ದರು.
Published on

ಎನ್.ಆರ್.ಪುರ: ಕರುಗುಂದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಜೀರ್ಣೊದ್ಧಾರಕ್ಕೆ ಸುಮಾರು 40 ಲಕ್ಷ ರೂ. ಅವಶ್ಯಕತೆ ಇದೆ. ರಸ್ತೆ ಹಾಗೂ ದೇವಾಲಯದ ಜೀರ್ಣೋದ್ಧಾರಕ್ಕೆ ಅನುದಾನ ನೀಡುವಂತೆ ಶಾಸಕ ಟಿ.ಡಿ.ರಾಜೇಗೌಡ ಅವರಿಗೆ ಮನವಿ ಮಾಡಲಾಗಿದ್ದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಉಪೇಂದ್ರಗೌಡ ತಿಳಿಸಿದರು.

ದೇವಸ್ಥಾನ ಅಭಿವೃದ್ಧಿ ಸಮಿತಿಯಿಂದ ಶಾಸಕ ಟಿ.ಡಿ.ರಾಜೇಗೌಡ ಹಾಗೂ ಮಾಜಿ ಎಂಎಲ್ಸಿ ಎಂ.ಶ್ರೀನಿವಾಸ್ ಅವರನ್ನು ಸನ್ಮಾನಿಸಿ ಮಾತನಾಡಿ, ಕರುಗುಂದ ಹಿಂದುಳಿದಿದೆ. ರಸ್ತೆ ಹದಗೆಟ್ಟಿದೆ. ದೇವಸ್ಥಾನ ಶಿಥಿಲಾವಸ್ಥೆ ತಲುಪಿದೆ. ತಳಪಾಯ, ಗೋಡೆ ಹಾಗೂ ಆರ್‌ಸಿಸಿ ಹಾಕಲಾಗಿದೆ ಎಂದರು.
ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್‌ಬೈಲ್ ನಟರಾಜ್, ಮುಖಂಡರಾದ ಎಚ್.ಎಂ.ಮನು, ಕೆ.ಸಿ.ಜಗದೀಶ್, ಶಂಕರಪ್ಪಗೌಡ, ನಂದೀಶ್, ಶ್ರೀಕಾಂತ್, ಲಿಂಗಣ್ಣ, ಭಾರತಿ ಚಂದ್ರಶೇಖರ್, ಗ್ರಾಪಂ ಸದಸ್ಯೆ ವಾಣಿ ನರೇಂದ್ರ, ರತ್ನಾಕರ, ಕೆ.ಸಿ.ಚಂದ್ರೇಗೌಡ, ಸುಂದರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net