ಸರ್ಕಾರಿ ವಸತಿ ನಿಲಯಗಳಿಗೆ ಹೆಚ್ಚುತ್ತಿದೆ ಬೇಡಿಕೆ

blg 8-1 jt
ಕೊರ್ತಿ ಪುರ್ನವಸತಿ ಕೇಂದ್ರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯವನ್ನು ಶಾಸಕ ಜೆ.ಟಿ. ಪಾಟೀಲ ಉದ್ಘಾಟಿಸಿದರು. ಕುಂದರಗಿಯ ಚರಂತಿಮಠದ ವೀರಸಂಗಮೇಶ್ವರ ಶ್ರೀಗಳು, ಮಲ್ಲಯ್ಯ ಕಂಬಿ, ಅಣವೀರಯ್ಯ ಪ್ಯಾಠಿಮಠ ಇತರರಿದ್ದರು.
Published on

ಬೀಳಗಿ: ವಿದ್ಯಾರ್ಥಿಗಳಿಗೆ ಊಟ ಹಾಗೂ ಎಲ್ಲ ವ್ಯವಸ್ಥೆ ಸಮರ್ಪಕವಾಗಿ ನೀಡುತ್ತಿರುವುದರಿಂದ ಸರ್ಕಾರಿ ವಸತಿ ನಿಲಯಗಳ ಬೇಡಿಕೆ ಹೆಚ್ಚುತ್ತಿದೆ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಜೆ.ಟಿ.ಪಾಟೀಲ ಹೇಳಿದರು.

ಸಮೀಪದ ಕೊರ್ತಿ ಪುನರ್ವಸತಿ ಕೇಂದ್ರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಬಡವರ ಮಕ್ಕಳು ಮಾತ್ರ ವಸತಿ ನಿಲಯದಲ್ಲಿ ಇದ್ದು ಅಭ್ಯಾಸ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಉಳ್ಳವರ ಮಕ್ಕಳು ಕೂಡ ಹಾಸ್ಟೆಲ್‌ಗಳಲ್ಲಿ ಅವಕಾಶ ಕೇಳುತ್ತಿದ್ದಾರೆ. ಮೆರಿಟ್ ಆಧಾರದ ಮೇಲೆ ಅವಕಾಶ ನೀಡಲಾಗುವುದು. ಆರ್ಥಿಕವಾಗಿ ಹಿಂದುಳಿದವರ ಮಕ್ಕಳಿಗೆ ಇದರಿಂದ ಹೆಚ್ಚಿನ ಅನುಕೂಲ ಒದಗಿಸಿಕೊಡಲಾಗುತ್ತಿದೆ ಎಂದರು.

ಕುಂದರಗಿಯ ಚರಂತಿಮಠದ ವೀರಸಂಗಮೇಶ್ವರ ಶ್ರೀಗಳು, ಮುಖಂಡರಾದ ಮಲ್ಲಯ್ಯ ಕಂಬಿ, ಗ್ಯಾರಂಟಿ ಯೋಜನೆ ತಾಲೂಕಾ ಅಧ್ಯಕ್ಷ ಅಣವೀರಯ್ಯ ಪ್ಯಾಠಿಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಣಮಂತ ಕಾಖಂಡಕಿ, ತಾ.ಪಂ. ಮಾಜಿ ಅಧ್ಯಕ್ಷ ಶ್ರೀಶೈಲ ಸೂಳಿಕೇರಿ, ಜಿ.ಪಂ. ಮಾಜಿ ಅಧ್ಯಕ್ಷ ಯಮನಪ್ಪ ರೊಳ್ಳಿ, ಸಿದ್ದು ಸಾರಾವರಿ, ಪ.ಪಂ. ಸದಸ್ಯ ರಾಜು ಬೋರ್ಜಿ, ಬಿ.ಸಿ.ಎಂ. ಇಲಾಖೆ ಅಧಿಕಾರಿ ಮೀನಾಕ್ಷಿ ಕೋಟಿ, ಬಸವರಾಜ ಹಳ್ಳದಮನಿ, ಕಾಶಿಂಅಲಿ ಗೋಠೆ, ಬಿ.ಪಿ. ಪಾಟೀಲ, ಉದಯ ರಜಪೂತ, ಚಿನ್ನಪ್ಪ ಬಂಡಿವಡ್ಡರ, ವಸತಿ ನಿಲಯ ಪಾಲಕ ಗುರುನಾಥ ತಳವಾರ, ಶಿಲ್ಪಾ ಯಡಹಳ್ಳಿ ಚಂದ್ರ ಮಾದರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net