ಕಸ ವಿಲೇವಾರಿಗೆ ಆಗ್ರಹ

24 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಇಲ್ಲಿನ ರಾಜೀವ ಗಾಂಧಿನಗರದ ಬಸ್​ ನಿಲ್ದಾಣ ಬಳಿಯ ಮುಖ್ಯರಸ್ತೆ ಪಕ್ಕದಲ್ಲಿ ರಾರಾಜಿಸುತ್ತಿರುವ ಕಸ ವಿಲೇವಾರಿ ಮಾಡುವಂತೆ ಬಡಾವಣೆ ನಿವಾಸಿಗಳು ಆಗ್ರಹಿಸಿದ್ದಾರೆ.

ಬಡಾವಣೆಯ ಮೊದಲನೇ ಬಸ್​ ನಿಲ್ದಾಣ ಬಳಿಯ ಮುಖ್ಯ ರಸ್ತೆ ಪಕ್ಕದಲ್ಲೇ ಕಸದ ರಾಶಿ ತುಂಬಿಕೊಂಡು ಹಲವು ದಿನಗಳಾದರೂ ಸಂಬಂಧಿಸಿದ ಅಧಿಕಾರಿಗಳು ವಿಲೇವಾರಿಗೆ ಕ್ರಮಕೈಗೊಳ್ಳುತ್ತಿಲ್ಲ. ಕಸದ ರಾಶಿ ಇರುವ ಸ್ಥಳದ ಬಳಿಯೇ ಆಸ್ಪತ್ರೆ, ಬೇಕರಿ ಇದೆ. ಇದರಿಂದ ಜನರಿಗೆ ಸಾಕಷ್ಟು ತೊಂದರೆ ಆಗುತ್ತಿರುವ ಕಾರಣ ಸ್ವಚ್ಛಗೊಳಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ಗಾಳಿಗೆ ಕಸ ರಸ್ತೆ ತುಂಬೆಲ್ಲ ಹರಡುವಂತಾಗಿದೆ. ಮನೆ, ಅಂಗಡಿಗಳ ಮುಂಭಾಗಕ್ಕೂ ಕಸ ಬರುತ್ತಿದೆ. ಕೂಡಲೇ ಪಾಲಿಕೆ ಸದಸ್ಯರು, ಅಧಿಕಾರಿಗಳು ಕಸ ವಿಲೇವಾರಿಗೆ ಕ್ರಮವಹಿಸಬೇಕು ಎಂದು ಬಡಾವಣೆ ನಿವಾಸಿ ಸುನಂದಾ ಕವಟಕೊಪ್ಪ ಹಾಗೂ ಬಡಾವಣೆ ನಿವಾಸಿಗಳು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net