

ಇಂಡಿ: ಗ್ರಾಮ ಪಂಚಾಯಿತಿ ನೌಕರರ ಕನಿಷ್ಠ ವೇತನ 31 ಸಾವಿರ ಹಾಗೂ 6 ಸಾವಿರ ರೂ. ಪಿಂಚಣಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರ ತಾಲೂಕು ಟಕ ವತಿಯಿಂದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಶನಿವಾರ ಮನವಿ ಸಲ್ಲಿಸಲಾಯಿತು.
ತಾಲೂಕು ಟಕದ ಅಧ್ಯ ತುಕಾರಾಮ ಮಾರನೂರ ಮಾತನಾಡಿ, ಕೇಂದ್ರ ಸರ್ಕಾರ ಖಾಸಗೀಕರಣವನ್ನು ತೀವ್ರವಾಗಿ ಜಾರಿ ಮಾಡುತ್ತಿರುವ ಹಿನ್ನೆಲೆಯ ಭಾಗವಾಗಿಯೇ ರಾಜ್ಯ ಸರ್ಕಾರವೂ ಸಹ ಅದೇ ನೀತಿಗಳನ್ನು ಜಾರಿ ಮಾಡುವ ಮುಂಚೂಣಿಯಲ್ಲಿದೆ. ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಲೇವಾರಿಯನ್ನು ಸಿ ಶಕ್ತಿ ಸಂಗಳ ಮುಖಾಂತರ ಜಾರಿ ಮಾಡಿಸುತ್ತಿದೆ.
ಸ್ಥಳಿಯ ಸಂಸ್ಥೆಗಳಲ್ಲಿ ಬಾಕಿ ಇರುವ ತೆರಿಗೆಗಳನ್ನು ವಸೂಲಿ ಮಾಡಲು ಸಿ ಶಕ್ತಿ ಮತ್ತು ಸ್ವ& ಸಹಾಯ ಸಂಗಳ ಮುಖಾಂತರ ವಸೂಲಿ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸರ್ಕಾರದ ಈ ನೀತಿಗಳಿಂದ ಗ್ರಾಮ ಪಂಚಾಯಿತಿಗಳಲ್ಲಿ ಶಾಶ್ವತವಾಗಿರುವ ಹುದ್ದೆಗಳನ್ನು ಸ್ಥಾನ ಪಲ್ಲಟ ಮಾಡಿ ಗುತ್ತಿಗೆ, ಹೊರಗುತ್ತಿಗೆ ನೀಡುವ ಖಾಸಗೀಕರಣದ ನೀತಿಗಳನ್ನು ಕೈಬಿಡಬೇಕು.
2004ರ ಏಪ್ರಿಲ್ 26ರ ಆದೇಶದಲ್ಲಿ ಖಾಲಿ ಹುದ್ದೆಗಳ ನೇಮಕಾತಿಯಲ್ಲಿ ಒಂದು ಹುದ್ದೆ ಮಾತ್ರ ತುಂಬಬೇಕು ಎಂಬುದು ಮಾರಕವಾಗಿರುವ ಆದೇಶವಾಗಿದೆ. ಈ ಆದೇಶವನ್ನು ಕೈಬಿಡಬೇಕು. ಅದರಂತೆ 2008ರ ಜನವರಿ 4 ರ ಸರ್ಕಾರದ ಆದೇಶದಂತೆ ವೃಂದ ಮತ್ತು ನೇಮಕಾತಿಯನ್ನು ಮಾಡಬೇಕೆಂದು ಒತ್ತಾಯಿಸಿದರು.
ವೇತನ ಹೆಚ್ಚಳ ಮಾಡಬೇಕು. ಗ್ರಾಮ ಪಂಚಾಯಿತಿಯ ಕರವಸೂಲಿಗಾರರು, ಸ್ವಚ್ಛತಾಗಾರರನ್ನು ಏಕಕಾಲಕ್ಕೆ ಸರ್ಕಾರ ನೌಕರರನ್ನಾಗಿ ೂಷಿಸಬೇಕು. ಜು.23 ರಂದು ರಾಜ್ಯಮಟ್ಟದ ಪ್ರತಿಭಟನೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅರ್ನಿದಿಷ್ಟಾವಧಿವರೆಗೆ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾ.ಪಂ ಸಿಬ್ಬಂದಿ ಭಾಗವಹಿಸಬೇಕು ಎಂದರು.
ಲಾಲಅಹ್ಮದ ಶೇಖ, ಅರವಿಂದ ದೊಡಮನಿ, ಚಂದ್ರಕಾಂತ ಕೋಳಿ, ಬಲಭೀಮ ಜಂಬಗಿ, ಈರಪ್ಪ ಬಿಸನಾಳ, ಶ್ರೀಶೈಲ ಸರೂರ, ಶ್ರೀಕಾಂತ ಮೋರೆ, ಶಿವಶಂಕರ ಶಿಂಧೆ ಇತರರಿದ್ದರು.