ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

CPIM RALLY IN MUNDGOD
Published on

ಮುಂಡಗೋಡ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಹಮಾಲಿ ಕಾರ್ವಿುಕರ ಫೆಡರೆಷನ್​ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಪಟ್ಟಣ ಪಂಚಾಯಿತಿ ಸಭಾ ಭವನದವರೆಗೆ ತೆರಳಿ ಅಲ್ಲಿ ಸಮಾವೇಶ ನಡೆಸಲಾಯಿತು. ಈ ಸಮಾವೇಶದಲ್ಲಿ ಎಲ್ಲ ಎಪಿಎಂಸಿ ಬಜಾರ್, ಗ್ರಾಮೀಣ ಪ್ರದೇಶಗಳಲ್ಲಿ ಮಿಲ್, ಗೋಡೌನಗಳಲ್ಲಿ ಕಾರ್ಯನಿರ್ವಹಿಸುವ ಹಮಾಲರಿಗೆ ಗುರುತಿನ ಚೀಟಿ, ಭವಿಷ್ಯನಿಧಿ, ಇಎಸ್​ಐ, ಬೋನಸ್, ಪಿಂಚಣಿ, ಮರಣ ಪರಿಹಾರ ಮುಂತಾದವುಗಳ ಬಗ್ಗೆ ಕಾನೂನು ಜಾರಿಗೆ ತರಬೇಕು, ಸಾರಿಗೆ ಕ್ಷೇತ್ರದ ಕಾರ್ವಿುಕರಿಗೆ ಸ್ಥಾಪಿಸಲಾಗುತ್ತಿರುವ ಉದ್ದೇಶಿತ ಕಲ್ಯಾಣ ಮಂಡಳಿಯಲ್ಲಿ ವಾಣಿಜ್ಯ ವಾಹನಗಳಲ್ಲಿ ಲೋಡಿಂಗ್, ಆನ್ ಲೋಡಿಂಗ್ ಕೆಲಸ ನಿರ್ವಹಿಸುವ ಹಮಾಲಿ ಕಾರ್ವಿುಕರನ್ನು ಸೇರಿಸಿಕೊಳ್ಳಬೇಕು, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ವಿುಕರ ಸಾಮಾಜಿಕ ಭದ್ರತಾ ಮಂಡಳಿಯನ್ನು ಮರುರಚಿಸಬೇಕು. ಮಂಡಳಿಯಲ್ಲಿ ಹಮಾಲಿ ಪೇಡರೇಷನ್​ಗೆ ಪ್ರಾತಿನಿಧ್ಯ ನೀಡಬೇಕು ಹೀಗೆ ವಿವಿಧ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಬೇಕು ಎಂದು ಆಗ್ರಹಿಸಲಾಯಿತು.

ಈ ವೇಳೆ ಮುಖಂಡರಾದ ಭೀಮಣ್ಣ ಭೋವಿವಡ್ಡರ, ಹನುಮಂತಪ್ಪ ಮಂಜುನಾಥ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net