

ಆಲಮೇಲ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂದಿಂದ ಅರ್ನಿದಿಷ್ಟ ಅವಧಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ತಾಲೂಕು ಟಕದ ಪದಾಧಿಕಾರಿಗಳು ತಹಸೀಲ್ದಾರ್ ಕಚೇರಿ ಎದುರು ಗುರುವಾರ ಮುಷ್ಕರ ನಡೆಸಿದರು.
ಸಂದ ಅಧ್ಯ ಯಲ್ಲಾಲಿಂಗ ವಾ ಮಾತನಾಡಿ, ಸರ್ಕಾರ ಮೊಬೈಲ್/ ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಸೂಕ್ತ ಸಾಧನಗಳನ್ನು ಅಳವಡಿಸುವವರೆಗೆ ಆಧಾರ್ ಕಾರ್ಡ್, ಲ್ಯಾಂಡ್ ಬೀಟ್, ಬಗೈರ್ ಹುಕುಂ, ಹಕ್ಕು ಪತ್ರ, ನಮೂನೆ 1&5ವೆಬ್ ಅಪ್ಲಿಕೇಶನ್, ಪೌತಿ ಆಂದೋಲನ ಕೆಲಸವನ್ನು ನಿರ್ವಹಿಸುವುದಿಲ್ಲ. ಸರ್ಕಾರ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸಿದರೆ ಮುಷ್ಕರ ಹಿಂಪಡೆಯಲಾಗುವುದು, ಇಲ್ಲದಿದ್ದರೆ ಮುಷ್ಕರವನ್ನು ನಿರಂತರವಾಗಿ ನಡೆಸಲಾಗುವುದು ಎಂದರು.
ಮುಷ್ಕರಕ್ಕೆ ತಾಲೂಕು ಸರ್ಕಾರಿ ನೌಕರರ ಸಂ, ತಾಲೂಕು ಗ್ರಾಮ ಸಹಾಯಕರ ಸಂ, ಕಂದಾಯ ನೌಕರರ ಸಂ, ಭೂ ಮಾಪಕರ ಸಂಗಳ ಪದಾಧಿಕಾರಿಗಳು ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿ ಮುಷ್ಕರದಲ್ಲಿ ಭಾಗವಹಿಸಿದ್ದರು.
ಗ್ರಾಮ ಆಡಳಿತ ಅಧಿಕಾರಿಗಳಾದ ಯಮನೂರ ಗೊಂದಳಿ, ಮಡಿವಾಳಪ್ಪಗೌಡ ಬಿರಾದಾರ, ಭೀಮಣ್ಣ ಜೇರಟಗಿ, ಮಾರುತಿ ಸಾಳುಂಕೆ, ಅನಿಲ ಅವಜಿ, ಮಂಜುನಾಥ ಡಂಬಳ, ವಿನೋದ ಬೀಸೆ, ಮೋನಪ್ಪ ಪೂಜಾರಿ, ಶ್ರೀನಿವಾಸ ಕಾಂಬಳೆ, ಎಸ್.ಎಸ್.ಹಳ್ಳಿ, ಅಕ್ಕಮ್ಮ ಗಸ್ತಿ, ಈರಣ್ಣಾ ಸ್ವಾದಿ ಇತರರಿದ್ದರು.