

ಮೂಡಲಗಿ: ರಾಜ್ಯದ ಎಲ್ಲ ಮಹಾನಗರ ಪಾಲಿಕೆ ಹಾಗೂ ಸ್ಥಳಿಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಪೌರ ನೌಕರರ ಸಂದ ತಾಲೂಕು ಟಕ ವತಿಯಿಂದ ಪಟ್ಟಣದ ಪುರಸಭೆ ಆವರಣದಲ್ಲಿ ಮಂಗಳವಾರ ಅರ್ನಿದಿಷ್ಟಾವಧಿ ಮುಷ್ಕರ ಆರಂಭಿಸಿದರು.
ದಲಿತ ಮುಖಂಡ ರಮೇಶ ಸಣ್ಣಕ್ಕಿ ಮಾತನಾಡಿ, ನಗರ, ಸ್ಥಳಿಯ ಸಂಸ್ಥೆಯ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ೂಷಿಸಬೇಕು. ವಿವಿಧ ಸೌಲಭ್ಯ ನೀಡುವ ಜತೆಗೆ ನಗರ, ಸ್ಥಳಿಯ ಸಂಸ್ಥೆಗಳಲ್ಲಿ 20&25 ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿರುವ ವಾಟರ್ಮನ್, ಕಂಪ್ಯೂಟರ್ ಆಪರೇಟರ್, ವಾಹನ ಚಾಲಕರು ಸೇರಿ ವಿವಿಧ ಕಾರ್ಮಿಕರನ್ನು ನೇರ ಪಾವತಿಯಡಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಪೌರ ನೌಕರರ ಸಂದ ತಾಲೂಕಾಧ್ಯ ಯಶವಂತ ತಿದ್ದಿಂಗಪ್ಪಗೋಳ ಮಾತನಾಡಿ, ನೌಕರರ ನ್ಯಾಯಸಮ್ಮತ ಬೇಡಿಕೆಗಳಿಗೆ ಶ್ರೀ ಸ್ಪಂದಿಸಬೇಕು. ಇಲ್ಲವಾದಲ್ಲಿ ಅರ್ನಿದಿಷ್ಟಾವಧಿ ಮುಷ್ಕರ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ಮುಷ್ಕರಕ್ಕೆ ಪುರಸಭೆ ಅಧಿಕಾರಿಗಳು ಹಾಗೂ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಸಂಟನೆ ಉಪಾಧ್ಯ ಶಿವಬೋಧ ಕಪ್ಪಲಗುದ್ದಿ, ಕಾರ್ಯದರ್ಶಿ ಮಲ್ಲಿಕಾರ್ಜುನ ಯರನಾಳ, ಪಾಂಡು ಮುತ್ತಗಿ, ಯಲ್ಲವ್ವ ಗಸ್ತಿ, ಪುರಸಭೆ ಮುಖ್ಯಧಿಕಾರಿ ತುಕಾರಾಮ ಮಾದರ, ಪುರಸಭೆ ಸದಸ್ಯ ಅಬ್ದುಲ್ಗಪ್ಪಾರ ಡಾಂಗೆ, ಮುಖಂಡರಾದ ಶಾಬು ಸಣ್ಣಕ್ಕಿ, ಈರಪ್ಪ ಢವಳೇಶ್ವರ, ಯಶವಂತ ಮಂಟೂರ ಇತರರಿದ್ದರು.