

ಖಾನಾಪುರ: ಬೀಡಿ ಗ್ರಾಮವನ್ನು ತಾಲೂಕು ಕೇಂದ್ರ ಮಾಡುವಂತೆ ಶನಿವಾರ ಗ್ರಾಮದಲ್ಲಿ ಪ್ರತಿಭಟಿಸಿ, ತಹಸೀಲ್ದಾರಗೆ ಮನವಿ ಸಲ್ಲಿಸಲಾಯಿತು.ಬ್ರಿಟಿಷರ ಆಡಳಿತದಲ್ಲಿ ಬೀಡಿ ಗ್ರಾಮ ಧಾರವಾಡ ಜಿಲ್ಲೆಯ ತಾಲೂಕು ಕೇಂದ್ರವಾಗಿತ್ತು. ಖಾನಾಪುರ ಕೊನೆಯ ಹಳ್ಳಿಯ ಗ್ರಾಮಸ್ಥರು ತಾಲೂಕು ಕೇಂದ್ರಕ್ಕೆ ಬರಬೇಕೆಂದರೆ 50 ಕಿಮೀ ಕ್ರಮಿಸುವ ಪರಿಸ್ಥಿತಿ ಇದೆ.ಬೀಡಿ ತಾಲೂಕು ರಚನಾ ಸಮಿತಿ ಅಧ್ಯ ವಿಠ್ಠಲ ಹಿಂಡಲಕರ, ಲಿಂಗನಮಠ ಗ್ರಾಪಂ ಅಧ್ಯ ಕಾಶೀಮ ಹಟ್ಟಿಹೋಳಿ ಹಿರಿಯರಾದ ಮಲ್ಲಿಕಾರ್ಜುನ ಇನಾಮದರ ಕರವೇ ಜಿಲ್ಲಾ ಕಾರ್ಯದರ್ಶಿ ಆರೋಗ್ಯಪ್ಪ ಪಾದನಕಟ್ಟಿ, ಬೀಡಿ ಗ್ರಾಪಂ ಅಧ್ಯ ಸಂತೋಷ ಕಾಶೀಲಕರ, ಮಾಜಿ ಸೆನಿಕರ ಸಂದ ಅಧ್ಯ ರಾಜೀವ ಪೆಜೋಳ್ಳಿ, ಬ್ಲಾಲ್ ಕಾಂಗ್ರೆಸ್ ಮಾಜಿ ಅಧ್ಯ ದೇಮಣ್ಣ ಬಸರಿಕಟ್ಟಿ, ಬೀಡಿ ಸಾಯಿ ವರ್ತಕರ ಸಂದ ಅಧ್ಯ ವಿಠ್ಠಲ ಮಳಕ, ಅಪ್ಪುಸಿ ಕೊಳ್ಳಿ, ಬಾಬು ಮಡಕರ, ಮಹಾಬಲೇಶವರ ಚವಲಗಿ, ಜ್ಞಾನೇಶ್ವರ ಪಾಳೆಕರ, ಸೋಮೇಶ ಗಡವಿರ, ವಕೀಲ ಮಹಾಂತೇಶ ಪಾಟೀಲ, ಕಾರ್ಮಿಕ ಸಂದ ಅಧ್ಯ ಶಿವಾ ಭಾಗವಡಕರ, ಗೆಣಪ್ಪನವರ, ದತ್ತು ಪಾಟೀಲ, ಬಸವರಾಜ ಭಂಗಿ ಇತರರಿದ್ದರು.