ನ್ಯಾಯ ಸಮ್ಮತ ಚುನಾವಣೆಗೆ ಒತ್ತಾಯ

CTD 8 KRS..-05
Published on

ಚಿತ್ರದುರ್ಗ: ರಾಜ್ಯ ವಿಧಾನಸಭಾ ಚುನಾವಣೆಯನ್ನು ಮುಕ್ತ, ನ್ಯಾಯ ಸಮ್ಮತವಾಗಿ ನಡೆಸುವಂತೆ ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ‌್ಯಕರ್ತರು ಜಿಲ್ಲಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಿದರು.

ಕೆಆರ್‌ಎಸ್ ಪಕ್ಷದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಮಾತನಾಡಿ, ನ್ಯಾಯ ಸಮ್ಮತ ಚುನಾವಣೆಗೆ ಒತ್ತಾಯಿಸಿದ ರಾಜ್ಯದೆಲ್ಲ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗುತ್ತಿದೆ. ಚಿತ್ರದುರ್ಗ 26ನೇ ಜಿಲ್ಲೆಯಾಗಿದೆ ಎಂದರು.

ಚುನಾವಣೆ ಘೋಷಣೆ ಮುನ್ನವೇ ವಿವಿಧ ಪಕ್ಷಗಳ ಪ್ರಮುಖರು, ಶಾಸಕರು, ಸಚಿವರು ಮತದಾರರಿಗೆ ಉಡುಗೊರೆಗಳನ್ನು ಹಂಚುವ ಮೂಲಕ ನ್ಯಾಯ ಸಮ್ಮತ ಚುನಾವಣೆ ಎಂಬುದನ್ನು ಹಾಸ್ಯಾಸ್ಪದಗೊಳಿಸುತ್ತಿದ್ದಾರೆ ಎಂದು ಹೇಳಿದರು.

ಕೋಟ್ಯಂತರ ರೂ. ಖರ್ಚಿನೊಂದಿಗೆ ಹೇಗಾದರೂ ಸರಿ ಗೆಲುವು ಸಾಧಿಸಬೇಕು ಎಂಬಂಥ ಮನಸ್ಥಿತಿಯ ಈ ರಾಜಕಾರಣಿಗಳಿಂದ ರಾ ಜ್ಯದ ಉದ್ಧಾರ ಹೇಗೆ ಸಾಧ್ಯ.? ಇಂಥವರಿಂದ ಭ್ರಷ್ಟಾಚಾರ ರಹಿತ, ಅಭಿವೃದ್ಧಿ ಪರ ಆಡಳಿತವನ್ನು ಹೇಗೆ ತಾನೇ ನಿರೀಕ್ಷಿಸಲಾದೀತು ಎಂದು ಪ್ರಶ್ನಿಸಿದರು.

ಮಹೇಶ್ ನಗರಂಗೆರೆ, ಜಬೀವುಲ್ಲಾ, ತನು, ಮಹೇಶ್ ಭಟ್ರಹಳ್ಳಿ, ಮಾರುತಿ, ಬಾಲರಾಜ್ ಮತ್ತಿತರ ಪಕ್ಷದ ಪ್ರಮುಖರು ಇ ದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net