ಬೆಳೆ ಹಾನಿ ಅರ್ಜಿ ಸ್ವೀಕಾರ ಅವಧಿ ವಿಸ್ತರಿಸಲು ಒತ್ತಾಯ

Demand for extension of crop damage application acceptance period
Published on

ನವಲಗುಂದ: ಬೆನ್ಣೆ ಹಳ್ಳ ಹಾಗೂ ತುಪ್ಪರಿ ಹಳ್ಳದ ಪ್ರವಾಹದಿಂದ ಬೆಳೆ ಹಾನಿ ಅನುಭವಿಸಿದ ರೈತರ ಅರ್ಜಿ ಸ್ವೀಕರಿಸುವ ಅವಧಿ ವಿಸ್ತರಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರರಿಗೆ ಬಿಜೆಪಿ ವತಿಯಿಂದ ಮನವಿ ಸಲ್ಲಿಸಲಾಯಿತು.

ಬಿಜೆಪಿ ಮಂಡಲ ಅಧ್ಯಕ್ಷ ಗಂಗಪ್ಪ ಮನಮಿ ಮಾತನಾಡಿ, ಪ್ರವಾಹ ಹಾಗೂ ಅತಿವೃಷ್ಟಿಯಾದ 72 ಗಂಟೆಯ ಒಳಗೆ ದಾಖಲಾತಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ಕೃಷಿ ಇಲಾಖೆ ಯಾವ ರೈತರಿಗೂ ತಿಳಿಸಿಲ್ಲ. ತಮ್ಮಷ್ಟಕ್ಕೆ ತಾವೇ ಅವಧಿ ನಿಗದಿ ಮಾಡಿದ್ದಾರೆ. ಈ ಗ ಅರ್ಜಿ ಸಲ್ಲಿಸಲು ರೈತರು ಹೋದರೆ ಅವಧಿ ಮುಗಿದೆ ಎಂದು ಹೇಳುತ್ತಿರುವುದು ಯಾವ ನ್ಯಾಯ. ಹೀಗಾಗಿ ತಹಸೀಲ್ದಾರರು ಮಧ್ಯೆ ಪ್ರವೇಶಿಸಿ,ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ, ರೈತರ ಅರ್ಜಿ ಸ್ವೀಕಾರಕ್ಕೆ ಅವಧಿ ವಿಸ್ತರಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಮೊರಬ ಗ್ರಾಮದ ಉಪತಹಸೀಲ್ದಾರ್ ಕಚೇರಿಯಲ್ಲಿಯೂ ದಾಖಲೆ ಒದಗಿಸಲು ರೈತರಿಗೆ ವ್ಯವಸ್ಥೆ ತಾಲೂಕಾಡಳಿತ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ನಾಗಪ್ಪ ಹರ್ತಿ, ಮಂಜುನಾಥ ಇಮ್ಮಡಿ, ಸಿದ್ದನಗೌಡ ಪಾಟೀಲ, ಜಯಪ್ರಕಾಶ ಬದಾಮಿ, ದೇವರಾಜ ಕರಿಯಪ್ಪನವರ, ಮಲ್ಲಿಕಾರ್ಜುನ ಸಂಗನಗೌಡರ, ಶ್ರೀಧರ ಪಟ್ಟಣಶೆಟ್ಟಿ, ಸಂತೋಷ ಹೊಸಮನಿ, ಕಲ್ಮೇಶ ಮಾದರ, ಈರಣ್ಣ ಬಳಿಗೇರ, ಹೊಳೆಯಪ್ಪ ಹೊಳೆಯಣ್ಣವರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net