ಎತ್ತಿನಹೊಳೆ ಯೋಜನೆ ಭೂಸ್ವಾಧೀನ ಪರಿಹಾರ ಧನ ಬಿಡುಗಡೆಗೆ ರೈತರ ಪಟ್ಟು

25 chelur 1
Published on

ಚೇಳೂರು : ಎತ್ತಿನಹೊಳೆ ಕಾಮಗಾರಿಗಾಗಿ ಗುಬ್ಬಿ ತಾಲೂಕು ನೆಲ್ಲೂರು ಗ್ರಾಪಂ ವ್ಯಾಪ್ತಿಯ ಹುಚ್ಚರಂಗಪ್ಪನ ಹಟ್ಟಿ, ನೆಲ್ಲೂರು, ಲಿಂಗಪುರ ರೈತರ ಜಮೀನುಗಳ ಭೂ ಸ್ವಾಧೀನ ಪ್ರಕ್ರಿಯೆ ಮುಗಿದಿದ್ದು, ಕಾಮಗಾರಿ ಮುಗಿದು ಅವಾರ್ಡ್ ಆಗದೆ ರೈತರಿಗೆ ಹಣ ಬಿಡುಗಡೆಯಾಗಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೆಲ್ಲೂರು ಗ್ರಾಪಂನ ನೂರಾರು ರೈತರ ಜಮೀನು ಎತ್ತಿನಹೊಳೆಗೆ ಸ್ವಾಧೀನವಾಗಿದ್ದು, ತೆಂಗು, ಅಡಕೆ, ಹುಣಸೆ ಮಾವು ಹಲಸು ಮನೆ ಕೊಳವೆಬಾವಿಗಳು ಕಳೆದುಕೊಂಡ ರೈತರು 2 ವರ್ಷಗಳಿಂದ ಬೆಳೆ ಪರಿಹಾರವಿಲ್ಲದೆ, ಹಣವೂ ಬಿಡುಗಡೆಯಾಗದೆ ಜಿಲ್ಲಾಕೇಂದ್ರಕ್ಕೆ ಅಲೆಯಲಾಗುತ್ತಿದೆ.

ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿಗಳು, ಭೂ ಸ್ವಾಧೀನ ಅಧಿಕಾರಿಗಳಿಗೆ ನಮಗೆ ಬರಬೇಕಾದ ಹಣ ಕೊಡಿಸಬೇಕೆಂದು ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೊಳವೆಬಾವಿಗಳು ಬತ್ತಿದ್ದು, ಅಲ್ಪ ನೀರಿನಲ್ಲಿ ಬೆಳೆದ ಬೆಳೆ ಕಳೆದುಕೊಂಡ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಎತ್ತಿನಹೊಳೆ ಕಾಮಗಾರಿ ಮುಗಿಯುತ್ತ ಬಂದಿದ್ದು ಇಲಾಖೆ ಅಧಿಕಾರಿಗಳು ರೈತರನ್ನು ಕಡೆಗಣಿಸುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಇದೇ ರೀತಿ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ನೆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೂ ಸ್ವಾಧೀನ ಬಿಲ್ ಪ್ರಕ್ರಿಯೆ ಮುಗಿಸಿ ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ. 5 ರಿಂದ 10 ಕೋಟಿ ರೂಪಾಯಿ ಬಿಲ್ ರೀಜನಲ್ ಕಮಿಷನರ್ ವ್ಯಾಪ್ತಿಗೆ ಬರಲಿದ್ದು, ಸರ್ಕಾರದ ಮಟ್ಟದಲ್ಲಿ ಆಗಬೇಕಾಗಿದೆ. ಬಿಲ್‌ಗಳನ್ನು ಕಳುಹಿಸಲಾಗಿದೆ. ಜಿ.ಡಿ.ಶೇಖರ್ ಭೂಸ್ವಾದೀನಾಧಿಕಾರಿ, ಎತ್ತಿನಹೊಳೆ ತುಮಕೂರು ಚೇಳೂರು ವಿದ್ಯುತ್ ಸ್ಥಾವರಕ್ಕೆ ಭೂ ಸ್ವಾಧೀನವಾಗಿದ್ದು, ಹುಚ್ಚರಂಗಪ್ಪನಹಟ್ಟಿಯಲ್ಲಿರುವ ನಮ್ಮ 3 ಎಕರೆ ಜಮೀನಿನಲ್ಲಿ 2 ಎಕರೆ ಎತ್ತಿನಹೊಳೆಗೆ ಭೂ ಸ್ವಾಧೀನವಾಗಿದೆ. ಮೂಲತಃ ಕೃಷಿಕರಾಗಿದ್ದು, ಕೃಷಿ ನಂಬಿ ಬದುಕುವ ಕನಸು ಮುರಿದು ಬಿದ್ದಂತಾಗಿದೆ. ನಮ್ಮ ಜಮೀನಲ್ಲಿರುವ ಗಿಡ ಮರಗಳಿಗೂ ಉತ್ತಮ ಬೆಲೆ ಕೊಡಬೇಕು. ಸರ್ಕಾರದ ಸಹ ಕಡಿಮೆ ಇದ್ದು, ಹೆಚ್ಚಿನ ಪರಿಹಾರ ನೀಡಬೇಕು. ಗಿರೀಶ್ , ಹುಚ್ಚರಂಗಪ್ಪನಹಟ್ಟಿ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net