ರೆಪರ್ಟರಿ ಮಾದರಿ ವಸತಿ ಶಾಲೆ ಸ್ಥಾಪನೆಗೆ ಆಗ್ರಹ

24 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಲೆ, ಕಲಾವಿದರು ಬದುಕಿದಾಗ ಮಾತ್ರ ಸ್ವಾಸ್ಥ$್ಯ ಸಮಾಜ ಕಟ್ಟಲು ಸಾಧ್ಯ. ಕಲೆ ಸಾಮಾಜಿಕ ಬದ್ಧತೆ ಹೊಂದಿರಬೇಕು. ನಮ್ಮ ಸಮಾಜ ಕಲಾವಿದರಿಗೆ ಮನ್ನಣೆ ನೀಡಬೇಕು ಎಂದು ಗಂಗೀಭಾವಿ ಯಲಿಗಾರ ಸೇವಾ ಸಂಸ್ಥೆ ಕಲಾಪೋಷಕ ಶಶಿಧರ ಯಲಿಗಾರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂದ ಜಾನಪದ ಮಂಟಪ ವತಿಯಿಂದ ಶಿಗ್ಗಾವಿಯ ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಹಯೋಗದಲ್ಲಿ ಹೊಸೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಡೊಳ್ಳು ಕಲಾ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಕಲಾವಿದರ ಮಕ್ಕಳಿಗೆ ಭವಿಷ್ಯದಲ್ಲಿ ವಸತಿ ಶಾಲೆ ಪ್ರಾರಂಭಿಸಿ ಉತ್ತಮ ಸಮಾಜದಲ್ಲಿ ಬದುಕುವ ವಾತಾವರಣ ನಿರ್ಮಾಣ ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂ ಇಂತಹ ಮಹತ್ವದ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಉತ್ತಮ ಕಾರ್ಯ ಎಂದರು.
ಡಾ. ಶ್ರೀಶೈಲ ಹುದ್ದಾರ ಮಾತನಾಡಿ, ಕಲೆ ಸಮಾಜದ ಕನ್ನಡಿ. ಕಲಾವಿದರಿಗೆ ಸರ್ಕಾರ ಆಥಿರ್ಕ ಸಹಾಯ ಮಾಡಬೇಕು. ಕಲಾವಿದರ ಮಕ್ಕಳಿಗೆ ರೆಪರ್ಟರಿ ಮಾದರಿಯಲ್ಲಿ ಕಲಾ ವಸತಿ ಶಾಲೆ ಆರಂಭಿಸಬೇಕು. ಯುವಕರಿಗೆ ತರಬೇತಿ ನೀಡಿ ಕಲೆ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.
ಕಲಾವಿದ ಇಮಾಮಸಾಬ್​ ವಲ್ಲೆಪ್ಪನವರ ಹಾಗೂ ನಿಂಗಪ್ಪ ಸುಣಗಾರ, ಗೂಳಪ್ಪ ಸುಣಗಾರ ಅವರಿಗೆ ಸನ್ಮಾನಿಸಲಾಯಿತು. ನಾಗರಾಜ ಸೂರಗೊಂಡ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಹಿರಿಯರಾದ ಶಂಕರಗೌಡ ಪಾಟೀಲ, ಸುಧೀರ ಛಬ್ಬಿ, ರಾಜೇಶ್ವರಿ ಲಮಾಣಿ, ಚನ್ನಪ್ಪ ಮಾದರ, ಶ್ರೀದೇವಿ ಪಾಟೀಲ, ಆನಂದ ನಾಯಕ್​, ಡಾ. ಬಿ.ವೈ. ತೊಂಡಿಹಾಳ, ಪ್ರೊ. ರಾಜು ಕೆಂಭಾವಿ, ಇತರರು ಇದ್ದರು.
ಡಾ. ರಾಜರತನ್​ ದಾದುಗೌಡರ ಸ್ವಾಗತಿಸಿದರು. ಸೌಂದರ್ಯ ನಂದಿ ನಿರೂಪಿಸಿದರು. ನಿಂಗಮ್ಮ ವಾಲ್ಮೀಕಿ ವಂದಿಸಿದರು. ನಂತರ ಡೊಳ್ಳಿನ ಕೈ ಪೆಟ್ಟು, ಡೊಳ್ಳಿನ ಹಾಡು, ಡೊಳ್ಳು ಕುಣಿತ, ಲಂಬಾಣಿ ಕುಣಿತ, ಇತರ ಕಲಾ ಪ್ರಕಾರಗಳನ್ನು ಪ್ರದಶಿರ್ಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net