ಮೊರಾರ್ಜಿ ದೇಸಾಯಿ ಶಾಲೆ ಸ್ಥಾಪನೆಗೆ ಒತ್ತಾಯ

SATHOSH RAJGUR
SATHOSH RAJGUR
Published on

 ರಾಯಚೂರು ಪಾಮನಕಲ್ಲೂರು ಗ್ರಾಮಕ್ಕೆ ಮಂಜೂರಿಯಾಗಿದ್ದ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಮಸ್ಕಿಗೆ ವರ್ಗಾ ವಣೆ ಮಾಡಿರುವದನ್ನು ರದ್ದುಗೊಳಿಸಿ ಪಾಮನ ಕಲ್ಲೂರು ಗ್ರಾಮದಲ್ಲಿಯೇ ಮುಂದುವರೆಸಬೇಕು. ಇಲ್ಲದಿದ್ದರೆ ಗ್ರಾಮಸ್ಥರು ಹೋರಾಟ ನಡೆಸುವದಾಗಿ ಮಾಜಿ ತಾಪಂ ಸದಸ್ಯ ಸಂತೋಷ ರಾಜಗುರು ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಮಾತನಾಡಿ, 2024-25 ಸಾಲಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಮಂಜೂರು ಮಾಡಲಾಗಿತ್ತು. ಆದರೆ ಸಮಾಜ ಕಲ್ಯಾಣ ಇಲಾಖೆ ಮಸ್ಕಿಗೆ ಸ್ಥಳಾಂತರ ಮಾಡುವಂತೆ 2025 ಫೆ.1 ರಂದು ಆದೇಶಿಸಲಾಗಿದೆ.

ಜವಳಗೇರಾ ಗ್ರಾಮಕ್ಕೆ ಮಂಜೂರಿಯಾದ ವಸತಿ ಶಾಲೆಯನ್ನು ಅಲ್ಲಿಯೇ ಪ್ರಾರಂಭಿಸಲು ಆದೇಶಿಸಿ ಪಾಮನಕಲ್ಲೂರು ಶಾಲೆಯನ್ನು ಮಾತ್ರ ಮಸ್ಕಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಈ ಕುರಿತು ಈಗಾಗಲೇ ಗ್ರಾಮಸ್ಥರು ಮಸ್ಕಿ ಶಾಸಕರು ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಮನವಿ ಮಾಡಿದ್ದಾರೆ.

ಆದರೂ ಯಾವುದೇ ಸ್ಪಂದನೆ ದೊರೆತಿಲ್ಲ. ವಸತಿ ಶಾಲೆಗೆ ಬೇಕಿರು ಭೂಮಿ ಲಭ್ಯತೆಯಿದ್ದರೂ ವಸತಿ ಶಾಲೆಯನ್ನು ಸ್ಥಳಾಂತರಿಸಿರುವದು ಅವೈಜ್ಞಾನಿಕವಾಗಿದೆ. ಪರಿಶಿಷ್ಟ ಜಾತಿ ಸಮೂದಾಯ ವಿದ್ಯಾರ್ಥಿಗಳಿಗೆ ಅನುಕೂಲವಾಗು ಶಾಲೆ ಮಸ್ಕಿಗೆ ಸ್ಥಳಾಂತರಿಸುವದನು ಕೈ ಬಿಡದಿದ್ದರೆ ಹೋರಾಟ ನಡೆಸುವದಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಶ್ರೀನಿವಾಸ, ಬಸವರಾಜ, ರಾಜಸಾಬ, ರಮೇಶ, ಲಕ್ಷ್ಮಣ, ಮಲ್ಲಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net