ಏಮ್ಸ್ ಆರೋಗ್ಯ ಸಂಸ್ಥೆ ಸ್ಥಾಪಿಸುವಂತೆ ಒತ್ತಾಯ

ಲಿಂಗಸುಗೂರು ಎಸಿ ಕಚೇರಿ ಎಫ್‌ಡಿಸಿ ಅನುಪಮಾ ಸಿಂಗ್‌ಗೆ ಏಮ್ಸ್ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ಡಿ.ಬಿ.ಸೋಮನಮರಡಿ, ಎಸ್.ಎಂ.ಕಾಡ್ಲೂರು, ಅಮರೇಶ ಗುಂಡಸಾಗರ, ರಾಜಾಸಾಬ, ಯಂಕಪ್ಪ ಚಿತ್ತಾಪುರ, ಬೋದು ನಾಯ್ಕ, ಯಲ್ಲಪ್ಪ ವಡ್ಡರ್, ಸಹದೇವಪ್ಪ ಈಚನಾಳ, ಬಸನಗೌಡ ಪಾಟೀಲ್, ಯಮನಪ್ಪ ಸರ್ಜಾಪುರ, ಶಂಕರಗೌಡ ಗುಂಡಸಾಗರ, ಮಲ್ಲನಗೌಡ ಇತರರಿದ್ದರು.
ಲಿಂಗಸುಗೂರು ಎಸಿ ಕಚೇರಿ ಎಫ್‌ಡಿಸಿ ಅನುಪಮಾ ಸಿಂಗ್‌ಗೆ ಏಮ್ಸ್ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ಡಿ.ಬಿ.ಸೋಮನಮರಡಿ, ಎಸ್.ಎಂ.ಕಾಡ್ಲೂರು, ಅಮರೇಶ ಗುಂಡಸಾಗರ, ರಾಜಾಸಾಬ, ಯಂಕಪ್ಪ ಚಿತ್ತಾಪುರ, ಬೋದು ನಾಯ್ಕ, ಯಲ್ಲಪ್ಪ ವಡ್ಡರ್, ಸಹದೇವಪ್ಪ ಈಚನಾಳ, ಬಸನಗೌಡ ಪಾಟೀಲ್, ಯಮನಪ್ಪ ಸರ್ಜಾಪುರ, ಶಂಕರಗೌಡ ಗುಂಡಸಾಗರ, ಮಲ್ಲನಗೌಡ ಇತರರಿದ್ದರು.
Published on

ಲಿಂಗಸುಗೂರು: ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಮಾಡುವಂತೆ ಒತ್ತಾಯಿಸಿ ಮೂರು ವರ್ಷದಿಂದ ಜಿಲ್ಲಾ ಏಮ್ಸ್ ಹೋರಾಟ ಸಮಿತಿ ಪ್ರತಿಭಟನಾ ಧರಣಿ ನಡೆಸುತ್ತಿದೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ಬಳಿ ಸಿಎಂ ಸಿದ್ದರಾಮಯ್ಯ ಅವರು ಸರ್ವ ಪಕ್ಷಗಳ ನಿಯೋಗ ತೆರಳಿ ಅನಿರ್ಧಿಷ್ಟ ಧರಣಿ ಕುರಿತು ಮನವರಿಕೆ ಮಾಡಬೇಕೆಂದು ಆಗ್ರಹಿಸಿ ಎಸಿ ಕಚೇರಿ ಎಫ್‌ಡಿಸಿ ಅನುಪಮಾ ಸಿಂಗ್‌ಗೆ ಮಂಗಳವಾರ ಮನವಿ ಸಲ್ಲಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶ ಎಲ್ಲ ಕ್ಷೇತ್ರಗಳಲ್ಲಿ ಹಿಂದುಳಿದಿದ್ದು, ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಡಾ.ಡಿ.ಎಂ.ನಂಜುಂಡಪ್ಪ ವರದಿಯಂತೆ ಐಐಟಿ ಸ್ಥಾಪಿಸಬೇಕು ಎಂಬ ಮಹತ್ವದ ನಿರ್ಧಾರವಾಗಿತ್ತು, ಆದರೆ, ರಾಯಚೂರು ಜಿಲ್ಲೆಗೆ ದ್ರೋಹವೆಸಗಿ ಧಾರವಾಡಕ್ಕೆ ಮಂಜೂರು ಮಾಡಲಾಯಿತು. ಕೇಂದ್ರ ಸರ್ಕಾರ 2020 ರಲ್ಲಿ ರಾಜ್ಯಕ್ಕೆ ಏಮ್ಸ್ ಮಂಜೂರು ಮಾಡುವ ನಿರ್ಧಾರ ಪ್ರಕಟಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ.

ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಹೋರಾಟಕ್ಕೆ ಜಿಲ್ಲಾಧಿಕಾರಿ ಸ್ಪಂದಿಸಿ ಏಮ್ಸ್ ಸ್ಥಾಪನೆಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಪೂರೈಸುವಂತೆ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಪ್ರಾದೇಶಿಕ ಅಸಮತೋಲನೆ ನಿವಾರಣೆಗಾಗಿ ಮಹತ್ವಕಾಂಕ್ಷಿ ಜಿಲ್ಲೆ ಎಂದು ಘೋಷಿಸಲ್ಪಟ್ಟ ರಾಯಚೂರಿನಲ್ಲಿ ಏಮ್ಸ್ ಆರೋಗ್ಯ ಸಂಸ್ಥೆ ಸ್ಥಾಪಿಸಬೇಕು ಎಂದು ರಾಜ್ಯ ಸರ್ಕಾರ ಸಚಿವ ಸಂಪುಟ ತೀರ್ಮಾನ ಕೈಗೊಂಡು ಸರ್ವ ಪಕ್ಷಗಳ ನಿಯೋಗ ತೆರಳಿ ಸುದೀರ್ಘ ಹೋರಾಟದ ಬಗ್ಗೆ ಮನವರಿಕೆ ಮಾಡಿ ಅನಿರ್ಧಿಷ್ಟ ಧರಣಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿದರು.

ಪ್ರಮುಖರಾದ ಡಿ.ಬಿ.ಸೋಮನಮರಡಿ, ಎಸ್.ಎಂ.ಕಾಡ್ಲೂರು, ಅಮರೇಶ ಗುಂಡಸಾಗರ, ರಾಜಾಸಾಬ, ಯಂಕಪ್ಪ ಚಿತ್ತಾಪುರ, ಬೋದು ನಾಯ್ಕ, ಯಲ್ಲಪ್ಪ ವಡ್ಡರ್, ಸಹದೇವಪ್ಪ ಈಚನಾಳ, ಬಸನಗೌಡ ಪಾಟೀಲ್, ಯಮನಪ್ಪ ಸರ್ಜಾಪುರ, ಶಂಕರಗೌಡ ಗುಂಡಸಾಗರ, ಮಲ್ಲನಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net