ಗ್ರಾಹಕ ವ್ಯವಹಾರ ಪರಿಹಾರ ಆಯೋಗದ ಪೀಠ ಸ್ಥಾಪನೆಗೆ ಆಗ್ರಹ

18 vikram 10 (Aravind bellad)
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕರ್ನಾಟಕ ರಾಜ್ಯ ಗ್ರಾಹಕ ವ್ಯವಹಾರ ಪರಿಹಾರ ಆಯೋಗದ ಪೀಠವನ್ನು ಧಾರವಾಡದಲ್ಲಿ ಸ್ಥಾಪಿಸಬೇಕು ಎಂದು ವಿಧಾನಸಭೆ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಆಗ್ರಹಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯ ಗ್ರಾಹಕ ವ್ಯವಹಾರ ಪರಿಹಾರ ಆಯೋಗದ ಪೀಠವನ್ನು ಉತ್ತರ ಕರ್ನಾಟಕ ಭಾಗದ ಗ್ರಾಹಕರ ಅನುಕೂಲಕ್ಕಾಗಿ ಧಾರವಾಡದಲ್ಲಿ ಸ್ಥಾಪಿಸಲು ಸರ್ಕಾರ ಮತ್ತು ರಾಜ್ಯ ಆಯೋಗಕ್ಕೆ ಹಲವು ಬಾರಿ ಮನವಿ ಮಾಡಿದರೂ ಬೆಳಗಾವಿಯಲ್ಲಿ ಸ್ಥಾಪನೆ ಪ್ರಕ್ರಿಯೆ ಆರಂಭವಾಗಿದೆ.

2008ರಿಂದ ಕರ್ನಾಟಕ ಉಚ್ಛ ನ್ಯಾಯಾಲಯದ ಪೀಠವು ಧಾರವಾಡದಲ್ಲೇ ಕಾರ್ಯ ನಿರ್ವಹಿಸುತ್ತಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಗೆ ಧಾರವಾಡ ಮಧ್ಯದಲ್ಲಿದ್ದು, ಸಂಪರ್ಕ ಸಹಜ ಅನುಕೂಲತೆ ಹೊಂದಿದೆ. ಉಚ್ಛ ನ್ಯಾಯಾಲಯದಲ್ಲಿ ವೃತ್ತಿ ಮಾಡುವ ನ್ಯಾಯವಾದಿಗಳು ಹೆಚ್ಚಾಗಿ ಧಾರವಾಡದಲ್ಲೇ ವಾಸಿಸುತ್ತಿದ್ದಾರೆ. ರಾಜ್ಯ ಗ್ರಾಹಕ ವ್ಯವಹಾರ ಪರಿಹಾರ ಆಯೋಗದ ಪೀಠ ಧಾರವಾಡದಲ್ಲಿ ಸ್ಥಾಪಿಸಲು ಸೂಕ್ತವಾದ ಕಟ್ಟಡವನ್ನು ಈಗಾಗಲೇ ಧಾರವಾಡ ಸಿವಿಲ್​ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಆಯೋಗಕ್ಕೆ ಕಟ್ಟಲಾಗಿದೆ. ಹೀಗಾಗಿ ರಾಜ್ಯದ ಈ ಭಾಗದ ಕಕ್ಷಿದಾರರ ಹಿತಾಸಕ್ತಿ ರಕ್ಷಣೆಗಾಗಿ ಆಯೋಗದ ಪೀಠವನ್ನು ಧಾರವಾಡದಲ್ಲೇ ಸ್ಥಾಪಿಸಬೇಕು ಎಂದು ಮುಖ್ಯಮಂತ್ರಿಗೆ ಅರವಿಂದ ಬೆಲ್ಲದ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net