ವಿದ್ಯುತ್ ಬಿಲ್ ಮನ್ನಾಗೆ ಆಗ್ರಹ

Demand for electricity bill waiver
ಬನಹಟ್ಟಿ ಕಾಡಸಿದ್ಧೇಶ್ವರ ದೇವಸ್ಥಾನದ ಬಳಿ ನೇಕಾರರು ತಮ್ಮ ಸಮಸ್ಯೆ ಶಾಸಕ ಸಿದ್ದು ಸವದಿಗೆ ವಿವರಿಸಿದರು. ಅಡಿವೆಪ್ಪ ಯಾದವಾಡ, ಈರಪ್ಪ ಚನಾಳ, ಮಹಾದೇವ ನುಚ್ಚಿ, ಶ್ರೀಶೈಲ ಬೀಳಗಿ, ಶಿವಾನಂದ ತೆಗ್ಗಿ, ಸುರೇಶ ಮುಗತಿ ಮತ್ತಿತರರಿದ್ದಾರೆ.
Published on

ರಬಕವಿ/ಬನಹಟ್ಟಿ: ನೇಕಾರರಿಗೆ ರಾಜ್ಯ ಸರ್ಕಾರ ರಿಯಾಯಿತಿ ದರದಲ್ಲಿ ವಿದ್ಯುತ್ ಒದಗಿಸುತ್ತಿದ್ದು, ಜಾರಿಯಾಗುವ ಹಿಂದಿನ 6 ತಿಂಗಳ ಬಿಲ್ ಪಾವತಿ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಹೆಸ್ಕಾಂ ಅಧಿಕಾರಿಗಳು ನೋಟಿಸ್ ನೀಡಿ ಮಾ.27ರಂದು ನಗರದಲ್ಲಿ ಮಗ್ಗಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ನೇಕಾರ ಮುಖಂಡ ಮಹಾದೇವ ನುಚ್ಚಿ ಆರೋಪಿಸಿದರು.

ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಈ ಕುರಿತಾಗಿ ಶಾಸಕ ಸಿದ್ದು ಸವದಿ ಅವರನ್ನು ಭೇಟಿ ಮಾಡಿ ವಿಷಯ ತಿಳಿಸಲಾಗಿತ್ತು. ಅವರು ಹೆಸ್ಕಾಂ ಅಧಿಕಾರಿಗಳನ್ನು ವಿಚಾರಿಸಿದಾಗ ಬಿಲ್ ಮೊತ್ತದ ಶೇ.50ರಷ್ಟು ಕಟ್ಟುವಂತೆ ತಿಳಿಸಿದ್ದಾರೆ ಎಂದರು.

ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂದ ಟಿರ್ಕಿ ಮಾತನಾಡಿ, ನೇಯ್ದ ಬಟ್ಟೆಗೆ ಹೊಟ್ಟೆ ತುಂಬುವುದೇ ಕಷ್ಟವಾಗಿದೆ. ಇಂಥ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರೆೆ ಅವರ ಬದುಕು ಮತ್ತೆ ಬೀದಿಗೆ ಬರುತ್ತದೆ. ಕೂಡಲೇ ಬಾಕಿ ವಿದ್ಯುತ್ ಬಿಲ್ ಸಂಪೂರ್ಣ ಮನ್ನಾ ಮಾಡಬೇಕು. ಇಲ್ಲವಾದರೆ ನೇಕಾರರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದರು.

ನೇಕಾರಿಕೆ ಉದ್ಯೋಗ ನೆಲಕ್ಕಚ್ಚಿದೆ. ಇಂಥಹ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಮಾಡಿದರೆ ಹೇಗೆ? ಸರ್ಕಾರ ಶಾಸಕರ ಸಂಬಳವನ್ನು ದುಪ್ಪಟ್ಟು ಹೆಚ್ಚಿಗೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಸಂಪೂರ್ಣ ಬಿಲ್ ಮನ್ನಾ ಮಾಡಬೇಕು. ಇಲ್ಲವಾದರೆ ಶೇ.50 ರಿಯಾಯತಿ ನೀಡಿದರೂ ಅದರಲ್ಲಿ ಕಂತುಗಳ ಮುಖಾಂತರ ಕಟ್ಟುವ ವ್ಯವಸ್ಥೆ ಮಾಡಬೇಕು ಎಂದು ನೇಕಾರರು ಆಗ್ರಹಿಸಿದರು.

ನೇಕಾರ ಮುಖಂಡರಾದ ಅಡಿವೆಪ್ಪ ಯಾದವಾಡ, ಈರಪ್ಪ ಚನಾಳ, ಮಹಾದೇವ ನುಚ್ಚಿ, ಶ್ರೀಶೈಲ ಬೀಳಗಿ, ಶಿವಾನಂದ ತೆಗ್ಗಿ, ಸುರೇಶ ಮುಗತಿ, ಶಿವಾನಂದ ಗ್ವಾಡ್ಯಾಳ, ಶ್ರೀಧರ ದಬಾಡಿ, ಕಾಡಪ್ಪ ಬುದ್ನಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net