ಸಚಿವ ಶಿವಾನಂದ ಪಾಟೀಲ್ ವಜಾಗೆ ಆಗ್ರಹ

26-kgl-1.,
ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ಖಂಡಿಸಿ ರೈತ ಸಂಘದ ಪದಾಧಿಕಾರಿಗಳು ಮಂಗಳವಾರ ಪಟ್ಟಣದ ಹೆದ್ದಾರಿ (209) ರಸ್ತೆ ಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಅಂಬಲೆ ಶಿವಕುಮಾರ್, ಸೋಮಣ್ಣ, ಬಸವಣ್ಣ ಮುಳ್ಳೂರು, ನಿರಂಜನ್ ಮೂರ್ತಿ, ಮಲ್ಲಯ್ಯನಪುರ ಚಿಕ್ಕರಾಜು ಇದ್ದರು.
Published on

ಕೊಳ್ಳೇಗಾಲ: ರೈತರ ಬಗ್ಗೆ ಹಗುರವಾಗಿ ಮಾತನಾಡಿರುವ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ರೈತ ಸಂಘದ ಸದಸ್ಯರು ಪಟ್ಟಣದ ಹೆದ್ದಾರಿ(209)ಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ತಾಲೂಕಿನ ನಾನಾ ಕಡೆಯಿಂದ ಆಗಮಿಸಿದ್ದ ರೈತರು ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡು ರಾಜ್ಯ ಸರ್ಕಾರ ಹಾಗೂ ಸಚಿವ ಶಿವಾನಂದ್ ಪಾಟೀಲ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಖಜಾಂಚಿ ಅಂಬಲೆ ಶಿವಕುಮಾರ್ ಮಾತನಾಡಿ, ರೈತರ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿರುವ ಸಚಿವ ಶಿವಾನಂದ ಪಾಟೀಲ್‌ನನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ರೈತರು ಸರ್ಕಾರಕ್ಕೆ ಉಚಿತ ಭಾಗ್ಯ ಕೊಡಿ ಎಂದು ಕೇಳಿಕೊಂಡಿಲ್ಲ. ಚುನಾವಣೆಯಲ್ಲಿ ಮತಗಳಿಸಲು ಉಚಿತ ಭಾಗ್ಯಗಳನ್ನು ನೀಡಿದ್ದಾರೆ. ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಎಂಬುದು ನಮ್ಮ ಒತ್ತಾಯ ಎಂದರು. ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗೌಡಳ್ಳಿ ಸೋಮಣ್ಣ, ಎಂ.ಪಿ. ಬಸವಣ್ಣ ಮುಳ್ಳೂರು, ನಿರಂಜನ್ ಮೂರ್ತಿ, ಮಲ್ಲಯ್ಯನಪುರ ಚಿಕ್ಕರಾಜು, ಎಂ.ಜಿ ದೊಡ್ಡಿ ಶ್ರೀನಿವಾಸ್, ಸುರೇಶ್ ಕಾಮಗೆರೆ, ಕುಣಗಳ್ಳಿ ಶಂಕರ, ಪಾಳ್ಯ ಸಿದ್ದರಾಜನಾಯಕ, ಮಹದೇವಸ್ವಾಮಿ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net