ಕಾಂಗ್ರೆಸ್ ಸರ್ಕಾರ ವಜಾಕ್ಕೆ ಆಗ್ರಹ

JDS
ಕಾಂಗ್ರೆಸ್ ಸರ್ಕಾರ ವಜಾಗೊಳಿಸಬೇಕು ಎಂದು ಆಗ್ರಹಿಸಿ ಶಿರಹಟ್ಟಿಯಲ್ಲಿ ಜೆಡಿಎಸ್ ಕಾರ್ಕರ್ತರು ಗ್ರೇಡ್ 1 ತಹಸೀಲ್ದಾರ್ ಎಸ್.ಎಚ್. ಭಜಂತ್ರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಎಂ.ವೈ. ಮುಧೋಳ, ಪ್ರವೀಣ ಬಾಳಿಕಾಯಿ, ಸಿದ್ದಯ್ಯ ಬಾಳಿಹಳ್ಳಿಮಠ, ಶರಣಪ್ಪ ಹೂಗಾರ, ವಿನಾಯಕ ಪರಬತ, ರಾಜೇಸಾಬ ಢಾಲಾಯತ ಇತರರಿದ್ದರು.
Published on

ಶಿರಹಟ್ಟಿ: ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಹಾಗೂ ಜನವಿರೋಧಿ ಆಡಳಿತದಲ್ಲಿ ತೊಡಗಿದ್ದು, ಸರ್ಕರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಜೆಡಿಎಸ್ ತಾಲೂಕು ಘಟಕದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿ ಗ್ರೇಡ್ 1 ತಹಸೀಲ್ದಾರ್ ಎಸ್.ಎಚ್. ಭಜಂತ್ರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವೈ. ಮುಧೋಳ, ಪ್ರವೀಣ ಬಾಳಿಕಾಯಿ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬರುವ ಹುಮ್ಮಸ್ಸಿನಲ್ಲಿ ಪಂಚಗ್ಯಾರಂಟಿ ಯೋಜನೆ ಘೋಷಣೆ ಮಾಡಿ ಜನರನ್ನು ಮರಳುಗೊಳಿಸಿದೆ. ಯೋಜನೆಗಳಿಗೆ ಹಣ ಹೊಂದಿಸಲು ಎಲ್ಲ ದಿನಸಿ ವಸ್ತುಗಳು, ಇಂಧನ ಬೆಲೆ ಏರಿಸಿ ಬಡ, ಮಧ್ಯಮ ವರ್ಗದ ಜನರ ಗಾಯದ ಮೇಲೆ ಬರೆ ಎಳೆದಿದೆ. ವಾಲ್ಮೀಕಿ ನಿಗಮದ ಹಣ ಲೂಟಿ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ದೂರಿದರು.

ಸಿದ್ದಲಿಂಗಯ್ಯ ಬಾಳಿಹಳ್ಳಿಮಠ, ಶರಣಪ್ಪ ಹೂಗಾರ, ವಿನಾಯಕ ಪರಬತ, ಯಲ್ಲಪ್ಪ ಹೂಗಾರ, ಫಕೀರೇಶ ತುಳಿ, ದೇವಪ್ಪ ಮಲ್ಲಸಮುದ್ರ, ಮುನ್ನಾ ಢಾಲಾಯತ, ವೀರೇಶ ಬಳಕಾರ, ಎಂ.ಕೆ. ಕೋಟಿಮಠ, ರಾಜೇಸಾಬ ಢಾಲಾಯತ, ಜೋಗೆಪ್ಪ ಆದಿ, ಬಸಪ್ಪ ಬಳ್ಳಾರಿ, ಅಭಿಷೇಕ ಕಂಬಳಿ, ಅಲ್ಲಾಬಕ್ಷ ಮುಳಗುಂದ, ಜಯರಾಜ ವಾಲಿ, ಲಲಿತಾ ಕಲ್ಲಪ್ಪನವರ, ರೇಖಾ ಬೆಂತೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net