ಸ್ವಚ್ಛತಾ ವಾಹನ ಚಾಲಕರ ನೇರ ನೇಮಕಾತಿ ಆಗ್ರಹ

21
Published on

ಮೈಸೂರು: ಸ್ವಚ್ಛತಾ ವಾಹನ ಚಾಲಕರನ್ನು ನೇರ ನೇಮಕಾತಿ ಮಾಡಬೇಕು ಎಂದು ಮಾಜಿ ಮೇಯರ್ ನಾರಾಯಣ ಅವರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ. ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸ್ವಚ್ಛತಾ ಚಾಲಕರ ಸಂಘ, ಪೌರಕಾರ್ಮಿಕರ ಮಹಾ ಸಂಘದಿಂದ ನಗರದ ಜಲದರ್ಶಿನಿಯಲ್ಲಿ ಶನಿವಾರ ಆಯೋಜಿಸಿದ್ದ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ಪೌರಕಾರ್ಮಿಕ ಕಾಯ್ದೆ ಅಡಿ ಸ್ವಚ್ಛತಾ ವಾಹನ ಚಾಲಕರು ಬರುತ್ತಾರೆ. ಆದರೆ ಅಧಿಕಾರಿಗಳು ಪೌರಕಾರ್ಮಿಕರು ಬೇರೆ, ಸ್ವಚ್ಛತಾ ಚಾಲಕರು, ಕಸ ತುಂಬುವರು, ಒಳಚರಂಡಿ ಕೆಲಸಗಾರು ಬೇರೆ, ಬೇರೆ ಪ್ರತ್ಯೇಕಗೊಳಿಸಿ ಎಂದು ಅನ್ಯಾಯ ಮಾಡಿದ್ದಾರೆ ಎಂದು ದೂರಿದರು. ಹಾಗಾಗಿ ಸ್ವಚ್ಛತಾ ಚಾಲಕರನ್ನು ಕೂಡಲೇ ನೇಮಕ ಮಾಡಬೇಕು. ಅಲ್ಲಿಯವರೆಗೆ ಗುತ್ತಿಗೆ ಪದ್ಧತಿಯನ್ನು ತೆಗೆದು ಸರ್ಕಾರದಿಂದಲೇ ನೇರ ವೇತನ ಪಾವತಿ ಎಂದು ಆಗ್ರಹಿಸಿದರು.

ಸರ್ಕಾರ ಗಮನ ಸೆಳೆಯಲು ಸಂಘಟನೆ ಬಲಿಷ್ಠಗೊಳಿಸಬೇಕು. ಅದಕ್ಕಾಗಿ ರಾಜ್ಯಮಟ್ಟದಲ್ಲಿ ಈಗಾಗಲೇ ಸಂಘ ಸ್ಥಾಪನೆಯಾಗಿದ್ದು, ಜಿಲ್ಲಾ ಕೇಂದ್ರಗಳಲ್ಲಿಯೂ ಸಂಘಗಳನ್ನು ರಚಿಸಲಾಗುವುದು. ಜಿಲ್ಲಾ ಘಟಕಗಳು ಸ್ಥಾಪಿಸಿ ಸಂಘಟನೆ ಮಾಡಬೇಕು ಎಂದು ಸಲಹೆ ನೀಡಿದರು.

ಮುಂದಿನ ದಿನಗಳಲ್ಲಿ ರಾಜ್ಯಮಟ್ಟದಲ್ಲಿ ಸಮಾವೇಶ ನಡೆಸಿ ಬೇಡಿಕೆ ಈಡೇರಿಸುವಂತೆ ಆಗ್ರಹಿಸಲಾಗುವುದು. ಮುಖ್ಯಮಂತ್ರಿಗೂ ಈ ಕುರಿತು ಮನವರಿಕೆ ಮಾಡಿಕೊಡಲಾಗಿದೆ ಎಂದು ಹೇಳಿದರು.

ಮುಖಂಡರಾದ ಓಬಲೇಶ್ವರ, ಆರ್.ಶಿವ, ಯುತಿರಾಜ್, ಆರ್.ದಾಸ್, ಅರ್ಟಿಸ್ ನಾಗರಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net