ವೇಗ ನಿಯಂತ್ರಕಗಳ ನಿರ್ಮಾಣಕ್ಕೆ ಆಗ್ರಹ

8Athani1
Published on

ಅಥಣಿ: ಪಟ್ಟಣದ ಹೊರವಲಯದ ರಾಜ್ಯ ಹೆದ್ದಾರಿಗಳಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತ ತಡೆಯಲು ಅಗತ್ಯವಿರುವ ಕಡೆಗೆ ವೇಗ ನಿಯಂತ್ರಕ ಅಳವಡಿಕೆ ಮಾಡುವಂತೆ ತಹಸೀಲ್ದಾರ್ ಸಿದರಾಯ ಭೋಸಗಿ ಅವರಿಗೆ ಮಂಗಳವಾರ ನಾಗರಿಕರು ಮನವಿ ಸಲ್ಲಿಸಿದರು.

ಈ ವೇಳೆ ಸಮಾಜ ಸೇವಕ ಸಂಪತ್ತಕುಮಾರ ಶೆಟ್ಟಿ ಮಾತನಾಡಿ, ಪಟ್ಟಣಗಳಿಗೆ ಸಂಪರ್ಕ ಒದಗಿಸುವ ಹಲವಾರು ಮುಖ್ಯ ರಸ್ತೆಗಳಿರುವುದರಿಂದ ಜನದಟ್ಟಣೆ ಜತೆಗೆ ವಾಹನಗಳ ಸಂಖ್ಯೆಯೂ ಹೆಚ್ಚಾಗಿದೆ. ಕಳೆದ 2 ವರ್ಷದಲ್ಲಿ ಸುಮಾರು 150ಕ್ಕೂ ಹೆಚ್ಚು ಜನ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ಪಟ್ಟಣದ ಸುತ್ತ ಮುತ್ತ 5 ಕಿಮೀ ಒಳಗಿನ ವಲಯದಲ್ಲಿ ಗಂಟೆಗೆ 40 ಕಿಮೀ ವೇಗಮಿತಿ ನಿಗದಿಪಡಿಸಬೇಕೆಂದು ಆಗ್ರಹಿಸಿದರು.

ತಹಸೀಲ್ದಾರ್ ಸಿದರಾಯ ಭೋಸಗಿ ಮನವಿ ಸ್ವೀಕರಿಸಿ ಮಾತನಾಡಿ, ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಂಡು ವಾಹನಗಳ ವೇಗ ಮಿತಿ ಕಡಿಮೆಗೊಳಿಸಲು ಕಾರ್ಯಯೋಜನೆ ರೂಪಿಸಲಾಗುವುದು ಎಂದರು.

ನಿಖಿಲ ಭಾಟೆ, ಭರತ ಸೋಮಯ್ಯ, ಎಸ್.ವಿ.ಶೆಟ್ಟಿ, ಚಂದ್ರಶೇಖರ ಯಲ್ಲಟ್ಟಿ, ರಾಜನ ಸೋಮಯ್ಯ, ರಾಜು ಕೊಳಲಗಿ, ಅಫಾನ್ ಮಾಸ್ಟರ್, ಎಸ್.ವಿ.ಕಾರವೇಕಾರ, ವಿಜಯ ಉಮರಾಣಿ, ಅಪ್ಪಾಸಾಹೇಬ ನಾಯಿಕ, ರಣಜಿತ್ ರಜಪೂತ, ಗೌರವ ಭಾಟೆ, ರಶೀದ್ ಶೆಡಬಾಳೆ, ಸುಭಾಷ ಬಾಮನೆ, ಪ್ರಶಾಂತ ತೊಡಕರ, ಎಂ.ಎ.ಬುಕಿಟಗಾರ, ಕೇಶವ ಬಡಿಗೇರ, ಮಹೇಶ ಮೇತ್ರಿ, ಗುರು ಅಡಹಳ್ಳಿ, ಸಿದ್ದರಾಜ ಬೊರಾಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net