ಶಾಶ್ವತ ನಿಲ್ದಾಣ ನಿರ್ಮಾಣ ಬೇಡಿಕೆ

riskshaw
ಶಾಶ್ವತ ಹಾಗೂ ಸುಸಜ್ಜಿತ ರಿಕ್ಷಾ ನಿಲ್ದಾಣ ನಿರ್ಮಾಣಕ್ಕಾಗಿ ಉಪ್ಪುಂದ ಆನೆಗಣಪತಿ ಆಟೋ ಚಾಲಕ-ಮಾಲೀಕ ಸಂಘದ ವತಿಯಿಂದ ಶಾಸಕರಿಗೆ ಮನವಿ ಸಲ್ಲಿಸಲಾಯಿತು
Published on

ಬೈಂದೂರು: ಉಪ್ಪುಂದದಲ್ಲಿ ಶಾಶ್ವತ ಮತ್ತು ಸುಸಜ್ಜಿತ ರಿಕ್ಷಾ ನಿಲ್ದಾಣ ಸ್ಥಾಪನೆಯ ಬೇಡಿಕೆ ಮುಂದಿರಿಸಿ ಆನೆಗಣಪತಿ ಆಟೋ ಚಾಲಕ-ಮಾಲೀಕ ಸಂಘದ ಸದಸ್ಯರು ಶಾಸಕ ಗುರುರಾಜ್ ಗಂಟಿಹೊಳೆ ಅವರಿಗೆ ಮನವಿ ಸಲ್ಲಿಸಿದರು.

ಬಳಿಕ ಪ್ರತಿಕ್ರಿಯಿಸಿದ ಸಂಘದ ಅಧ್ಯಕ್ಷ ಕಾಸನಾಡಿ ನಾರಾಯಣ ಪೂಜಾರಿ, ಹೆದ್ದಾರಿ ಅಗಲೀಕರಣದಿಂದ ಆಟೋ ನಿಲ್ದಾಣವಿಲ್ಲದಂತಾಗಿದ್ದು, ಮುಖ್ಯರಸ್ತೆಯ ಒಂದು ಭಾಗದಲ್ಲಿ ನಮ್ಮ ರಿಕ್ಷಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಎದುರಾಗುತ್ತಿದೆ. ಬೈಂದೂರು ಸುತ್ತಮುತ್ತಲು ಸೂಕ್ತ ರಿಕ್ಷಾ ನಿಲ್ದಾಣಗಳ ಇಲ್ಲದಿದ್ದು, ರಿಕ್ಷಾ ಚಾಲಕರು ಅತಂತ್ರ ಸ್ಥಿತಿ ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಪರಿಸ್ಥಿತಿಯನ್ನು ಅವಲೋಕಿಸಿ ನಮ್ಮ ಸಂಘಕ್ಕೊಂದು ಶಾಶ್ವತ ನಿಲ್ದಾಣ ನಿರ್ಮಾಣ ಮಾಡಿಕೊಡಬೇಕೆಂದು ಮನವಿ ಮಾಡಿದ್ದೇವೆ ಎಂದರು.

ಶಾಶ್ವತ ರಿಕ್ಷಾ ನಿಲ್ದಾಣ ಸ್ಥಾಪನೆಗೆ ಸ್ಥಳ ನಿಗದಿ ಮಾಡುವುದರ ಜತೆಗೆ ಶೀಘ್ರವೇ ಅಡೆತಡೆಗಳನ್ನು ನಿವಾರಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು. ಸಂಘದ ಸದಸ್ಯರಾದ ಉಪ್ರಳ್ಳಿ ನಾರಾಯಣ ಶ್ಯಾನುಭಾಗ್, ಸಚಿನ್ ಪೂಜಾರಿ, ರಾಮ ಉಪ್ಪುಂದ, ಮಹಾಬಲ ಪೂಜಾರಿ ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net