ಕುಷ್ಟಗಿ-ಗೋಕಾಕ ನೂತನ ರೈಲು ಮಾರ್ಗ ನಿರ್ಮಿಸುವಂತೆ ಆಗ್ರಹ

Demand for construction of Kushtagi-Gokak new railway line
Published on

ನರಗುಂದ: ಕುಷ್ಟಗಿಯಿಂದ ನರಗುಂದ ಮಾರ್ಗವಾಗಿ ಗೋಕಾಕ ವರೆಗೆ ನೂತನ ರೈಲು ಮಾರ್ಗಕ್ಕೆ ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳ ಸದಸ್ಯರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ, ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಅವರಿಗೆ ಗುರುವಾರ ಅಂಚೆ ಇಲಾಖೆ ಅಧಿಕಾರಿ ಎ.ಐ. ರಾಯನಗೌಡ್ರ ಮೂಲಕ ಮನವಿ ರವಾನಿಸಿದರು.

ವರ್ತಕ ರಾಘವೇಂದ್ರ ಗುಜಮಾಗಡಿ ಮಾತನಾಡಿ, ನರಗುಂದ ದಿನದಿಂದ ದಿನಕ್ಕೆ ಹೆಚ್ಚಿನ ಅಭಿವೃದ್ಧಿ ಹೊಂದುತ್ತಿದೆ. ಈ ಭಾಗದ ರೈತರು, ವ್ಯಾಪಾರಸ್ಥರು ವಿವಿಧ ಕೃಷಿ ಹಾಗೂ ವಾಣಿಜ್ಯ ಕೆಲಸಗಳಿಗೆ ಗೋಕಾಕ, ಬೆಳಗಾವಿ ಸಂಪರ್ಕಿಸಲು ರೈಲು ಮಾರ್ಗದ ಅಗತ್ಯವಿದೆ ತಕ್ಷಣವೇ ಯೋಜನೆಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.

ಚನ್ನು ನಂದಿ, ದೇವೇಂದ್ರ ಶೆಟ್ಟಿ, ಮಾರುತಿ ಬೋಸಲೆ, ಎಚ್.ವಿ. ಪಾಟೀಲ, ಪುನೀತ ಶೆಟ್ಟಿ, ದೀಪಕ, ರಾಜೇಶ ಶೆಟ್ಟಿ, ಎಚ್.ಎಂ. ಕಮ್ಮಾರ, ಸುನೀಲ ಲಿಂಬಿಕಾಯಿ, ಆರ್.ಬಿ. ಚಿನಿವಾಲರ, ಐ.ಪಿ. ಚಂದೂನವರ, ಎಂ.ಎ. ತೋರಗಲ್, ಶಿವಶಂಕರ ನಾಗಠಾಣ ಉಪಸ್ಥಿತರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net