ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಲು ಆಗ್ರಹ

Demand for completion of drainage works
Published on

ವಿಜಯಪುರ:ನಗರದ ಇರಾನಿ ಹಾಗೂ ಫಕೀರ್​ ಬಸ್ತಿ ಕಾಲನಿಗಳಲ್ಲಿ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ಸ್ಥಳಿಯ ನಿವಾಸಿಗಳು ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.ನಗರದ ವಾರ್ಡ್​ ನಂ. 25ರ ವ್ಯಾಪ್ತಿಯ ಆಸಾರ ಮಹಲ್​ ಬಳಿಯ ಇರಾನಿ ಕಾಲನಿ ಹಾಗೂ ಫಕೀರ್​ ಬಸ್ತಿ (ಮಕಾನಂದಾರ ಕಾಲನಿ) ಯಲ್ಲಿ ಮಹಾನಗರ ಪಾಲಿಕೆ 2023, ಜೂ.26ರಂದು ಒಳಚರಂಡಿ ಕಾಮಗಾರಿ ಆರಂಭಕ್ಕೆ ಅನುಮತಿ ನೀಡಿ ಕಾಮಗಾರಿಗೆ ಭೂಮಿ ಪೂಜೆಯೂ ನಡೆದಿತ್ತು. ಆದರೆ, ಸ್ಥಳಿಯ ಶಾಲೆಯೊಂದರ ಆಡಳಿತ ಮಂಡಳಿ ಆ ಜಾಗ ತಮ್ಮ ಶಿಕ್ಷಣ ಸಂಸ್ಥೆಗೆ ಸಂಬಂಧಿಸಿದ್ದು, ಇಲ್ಲಿ ಒಳಚರಂಡಿ ನಿರ್ಮಿಸಲು ಬಿಡಲ್ಲ ಎಂದು ತಕರಾರು ಸಲ್ಲಿಸಿದ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭದಲ್ಲೇ ಅರ್ಧಕ್ಕೆ ನಿಂತಿದೆ. ಇದರಿಂದಾಗಿ ಎರಡೂ ಬಡಾವಣೆಗಳ ಮಹಿಳೆಯರು, ಮಕ್ಕಳು, ವೃದ್ಧರು ಶೌಚಗೃಹ ವ್ಯವಸ್ಥೆ ಇಲ್ಲದೆ ಕಷ್ಟ ಅನುಭವಿಸುವಂತಾಗಿದೆ ಎಂದು ನಿವಾಸಿಗಳು ಅಳಲು ತೋಡಿಕೊಂಡರು.

ಬಡಾವಣೆಗಳಲ್ಲಿ ಬಡವರಿದ್ದು, ಬೀದಿ ವ್ಯಾಪಾರಿಗಳು, ಚಸ್ಮಾ ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕೂಡಲೇ ಎರಡೂ ಕಾಲನಿಗಳಲ್ಲಿ ಒಳಚರಂಡಿ ಕಾಮಗಾರಿ ಆರಂಭಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಸ್ಟೇಶನ್​ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗವುದೆಂದು ಮನವಿಯಲ್ಲಿ ಎಚ್ಚರಿಸಿದರು.

ಈ ವೇಳೆ ಅಪರ ಜಿಲ್ಲಾಧಿಕಾರಿ ಸೋಮನಿಂಗ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಲಾಯಿತು.ಪಾಲಿಕೆ ಸದಸ್ಯೆ ಸುಫೀಯಾ ವಾತಿ, ಅಫ್ರೋಜ್​ ವಾತಿ, ಅಬ್ದುಲ್​ರಜಾಕ್​ ಮಕಾನಂದಾರ, ಹಮ್ಜಾ ಇರಾನಿ, ಗರೀಬಹುಸೇನ್​ ಇರಾನಿ, ಸಾಧೀಕ್​ ಇರಾನಿ, ಖಾಜಾಬಿ ಮಕಾನಂದಾರ, ರಜೀಯಾ ಇರಾನಿ, ಅನ್ವರ್​ ಇರಾನಿ, ಮೌಲಾ ಮಕಾನದಾರ ಮತ್ತಿತರರಿದ್ದರು.

ಫೋಟೋ : ಎಂಎಂ 6&6

ವಿಜಯಪುರದ ಇರಾನಿ ಹಾಗೂ ಫಕೀರ್​ ಬಸ್ತಿ ಕಾಲನಿಗಳಲ್ಲಿ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯಿಸಿ ಸ್ಥಳಿಯ ನಿವಾಸಿಗಳು ಅಪರ ಜಿಲ್ಲಾಧಿಕಾರಿ ಸೋಮನಿಂಗ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಿದರು. ಅಬ್ದುಲರಜಾನ ಮಕಾನಂದಾರ, ಹಮ್ಜಾ ಇರಾನಿ, ಗರೀಬಹುಸೇನ ಇರಾನಿ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net