

ಹುಬ್ಬಳ್ಳಿ: ಮರಾಠಾ ಗಲ್ಲಿಯ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ವರ್ತುಲಕ್ಕೆ ಶಿವಾಜಿ ಚೌಕ್ ಎನ್ನಲಾಗುತ್ತಿದೆ. ಇದು ರಾಜರಿಗೆ ಆಗೌರವ ಸಲ್ಲಿಸುವಂತಿದೆ. ತಕ್ಷಣ ಸರ್ಕಲ್ನ ನಾಲ್ಕೂ ದಿಕ್ಕಿಗೆ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಚೌಕ್ ಎಂದು ನಾಮ ಫಲಕ ಹಾಕಲು ಆಗ್ರಹಿಸಿ ಮಹಾಪೌರ ರಾಮಪ್ಪ ಬಡಿಗೇರ ಅವರಿಗೆ ಸೋಮವಾರ ನಗರದಲ್ಲಿ ಮನವಿ ಸಲ್ಲಿಸಲಾಯಿತು.
ಸಮಸ್ತ ಮರಾಠಾ ಸಮಾಜ ಸೇವಾ ಸಂಘದ ಅಧ್ಯಕ್ಷ ದಯಾನಂದ ಚವ್ಹಾಣ, ಪ್ರಧಾನ ಕಾರ್ಯದರ್ಶಿ ಬಸ್ವಂತ ಸಿಂಧೆ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರು ಬ್ರಾಡ್‌ವೇ ದುರ್ಗದ ಬೈಲ್‌ಗೆ ಆಗಮಿಸಿದ್ದರ ಕುರಿತು ಇತಿಹಾಸವಿದೆ. ಹಾಗಾಗಿ ಅಂದಿನಿಂದ ಶಿವಾಜಿ ಮಹಾರಾಜರ ಚೌಕ್ ಎಂದು ಪ್ರಸಿದ್ಧಿ ಪಡೆದಿದೆ. ಬರೀ ಶಿವಾಜಿ ಚೌಕ್ ಎನ್ನುವ ಬದಲಿಗೆ ಛತ್ರಪತಿ ಶಿವಾಜಿ ಮಹಾರಾಜರ ಚೌಕ್ ಎಂದು ನಾಮಫಲಕ ಹಾಕಬೇಕು. ಇತಿಹಾಸ ಮರುಕಳಿಸುವಂತೆ ಮಾಡಬೇಕು. ಫೆ. 10ರೊಳಗೆ ನಾಮಫಲಕ ಅಳವಡಿಸಬೇಕು ಎಂದು ಮನವಿ ಸಲ್ಲಿಸಿ ಒತ್ತಾಯಿಸಿದರು. ತಾವು ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕರ ನೇತೃತ್ವದಲ್ಲಿ ನಾಮಫಲಕ ಅಳವಡಿಸುತ್ತೇವೆಂದು ತಿಳಿಸಿದರು.
ಬೇಡಿಕೆಯನ್ನು ತಕ್ಷಣ ಕಾರ್ಯರೂಪಕ್ಕೆ ತರಬೇಕು ಎಂದು ಮಹಾಪೌರರು, ಪಾಲಿಕೆ ಆಯುಕ್ತರು, ವಾರ್ಡ್ ನಂ. 63 ಹಾಗೂ 64ನೇ ವಿಭಾಗದ ಪಾಲಿಕೆ ಸದಸ್ಯರಲ್ಲಿ ವಿನಂತಿಸಿದರು.
ಪ್ರಮುಖರಾದ ಮಂಜುನಾಥ ಚವ್ಹಾಣ, ರಾಘವೇಂದ್ರ ಶಿಂಧೆ, ಸಂತೋಷ ಖೈರೆ, ರಾಮಚಂದ್ರ ಯಾದವ್, ಶಿವಾಜಿ ಜಾಧವ್, ಪರಶುರಾಮ ಹೋಡದಕಟ್ಟಿ, ಶಿವಾಜಿ ವೈದ್ಯ, ಗುಡ್ರಾಜ್ ಕಾಟೇನವರ, ವಿಶ್ವಾಸರಾವ್ ಜಾಧವ, ಗುರುನಾಥ ವೈದ್ಯ, ಮಹೇಶ ದಾಬಡೆ, ಸುರೇಶ ನಾಲ್ವಡಿ, ಆರ್.ಜಿ. ಪಾಟೀಲ, ರಾಮಚಂದ್ರ ಮಿರರ್ಗಾಣಿ, ನಾರಾಯಣ ಶಿಂಧೆ ಇತರರು ಉಪಸಿತರಿದ್ದರು.