ಹೊಸಳ್ಳಿ ಗೇಟ್ ಬಳಿ ಬಸ್ ನಿಲುಗಡೆ ಆಗ್ರಹ

ಅರಸೀಕೆರೆ ತಾಲೂಕಿನ ಜಾಜೂರು ಗ್ರಾಮದ ಹೊರವಲಯದಲ್ಲಿ ಇರುವ ಪ್ರಥಮ ದರ್ಜೆ ಕಾಲೇಜಿನ ಹೊಸಳ್ಳಿ ಗೇಟ್ ಬಳಿ ಬಸ್ ನಿಲುಗಡೆಗೆ ಒತ್ತಾಯಿಸಿ ಧರಣಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಮಿನಾಕ್ಷ ಚಂದ್ರು, ಚೌಡಯ್ಯ, ಮಂಜು ತೋರಣ್, ಶರತ್, ಡಾ.ರಘು, ವಿನೋದ್ ಕುಟ್ಟಿ, ಉಮಾ ಕುಮಾರ್, ಸಿಂಧು, ಸುಧಾ, ಸರೋಜಮ್ಮ ಇತರರು ಇದ್ದರು.
ಅರಸೀಕೆರೆ ತಾಲೂಕಿನ ಜಾಜೂರು ಗ್ರಾಮದ ಹೊರವಲಯದಲ್ಲಿ ಇರುವ ಪ್ರಥಮ ದರ್ಜೆ ಕಾಲೇಜಿನ ಹೊಸಳ್ಳಿ ಗೇಟ್ ಬಳಿ ಬಸ್ ನಿಲುಗಡೆಗೆ ಒತ್ತಾಯಿಸಿ ಧರಣಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಮಿನಾಕ್ಷ ಚಂದ್ರು, ಚೌಡಯ್ಯ, ಮಂಜು ತೋರಣ್, ಶರತ್, ಡಾ.ರಘು, ವಿನೋದ್ ಕುಟ್ಟಿ, ಉಮಾ ಕುಮಾರ್, ಸಿಂಧು, ಸುಧಾ, ಸರೋಜಮ್ಮ ಇತರರು ಇದ್ದರು.
Published on

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಜಾಜೂರು ಸಮೀಪದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹೊಸಳ್ಳಿ ಗೇಟ್ ಬಳಿ ಕೆಎಸ್‌ಆರ್‌ಟಿಸಿ ಬಸ್‌ಗಳ ನಿಲುಗಡೆಗೆ ಒತ್ತಾಯಿಸಿ ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆ ಮುಖಂಡರು ಬುಧವಾರ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಮೀನಾಕ್ಷ ಚಂದ್ರು, ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಬಡತನದ ಹಿನ್ನೆಲೆಯನ್ನು ಹೊಂದಿದ್ದಾರೆ. ಅಲ್ಲದೆ ಶೈಕ್ಷಣಿಕ ಶುಲ್ಕ ಕಟ್ಟಲು ಪರದಾಡುವಂತಹವರು. ಹೀಗಾಗಿ ಅರಸೀಕೆರೆ ಹಾಗೂ ಗ್ರಾಮಾಂತರದಿಂದ ಬರುವ ಮಕ್ಕಳು ಕಾಲೇಜಿಗೆ ಬಂದು ಹೋಗಲು ಬಸ್‌ಗಳು ನಿಲುಗಡೆ ನೀಡದ ಪರಿಣಾಮ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಹೊಸಳ್ಳಿ ಗೇಟ್‌ನಲ್ಲಿ ಬಸ್‌ಗಳ ನಿಲುಗಡೆ ನೀಡುವಂತೆ ಕೆಎಸ್ಸಾರ್ಟಿಸಿ ಅಧಿಕಾರಿಗಳು, ಶಾಸಕರು ಹಾಗೂ ಜಾಜೂರು ಪಂಚಾಯಿತಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಇಳಿದಿದ್ದೇವೆ. ಇನ್ನಾದರು ಈ ಸ್ಥಳಕ್ಕೆ ಬಸ್ ನಿಲುಗಡೆಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಮುಖಂಡ ಚೌಡಪ್ಪ, ಪ್ರತಿನಿತ್ಯ ಗ್ರಾಮೀಣ ಭಾಗಗಳಿಂದ ಬರುವ ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಆಟೋಗೆ 30 ರೂ.ನಂತೆ ತಿಂಗಳಿಗೆ 750 ರಿಂದ 900 ರೂ. ತನಕ ಹಣ ನೀಡಬೇಕಿದೆ. ಇದು ಸಾಮಾನ್ಯ ಜನಕ್ಕೆ ಹೊರೆ ಆಗಲಿದೆ. ಅಲ್ಲದೆ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಬರಲು ಸಾಧ್ಯವಾಗದೆ ಶೈಕ್ಷಣಿಕವಾಗಿ ಹಿಂದುಳಿಯುವಂತಾಗಿದೆ. ಈ ಹಿನ್ನೆಲೆಯಲ್ಲಿ ಬಸ್ ನಿಲುಗಡೆಗೆ ಆಗ್ರಹಿಸಿ ಕೈಗೊಂಡಿರುವ ಹೋರಾಟ ಇಷ್ಟಕ್ಕೆ ನಿಲ್ಲುವುದಿಲ್ಲ. ಬೇಡಿಕೆ ಈಡೇರದಿದ್ದರೆ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮಂಜು ತೋರಣ್ ಮಾತನಾಡಿದರು. ಈ ವೇಳೆ ಸುಮಾರು ಮುಕ್ಕಾಲು ತಾಸಿಗೂ ಹೆಚ್ಚು ಹೊತ್ತು ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು. ತಾಪಂ ಮಾಜಿ ಸದಸ್ಯೆ ಉಮಾ ಕುಮಾರ್, ಸಿಂಧು, ಸವಿತಾ, ಸರೋಜಮ್ಮ ಸುನೀತಾ, ವಕೀಲ ಪ್ರವೀಣ್ ಕುಮಾರ್, ವಿನೋದ್ ಕುಟ್ಟಿ, ಡಾ.ರಘು, ಜೇನುಶರತ್, ಡಾ.ಹರೀಶ್, ಶಿವುಕುಮಾರ್ ಹಾಗೂ ಗ್ರಾಮಸ್ಥರು ವಿದ್ಯಾರ್ಥಿಗಳ ಪ್ರತಿಭಟನೆ ಸಾಥ್ ನೀಡಿದರು. ನಂತರ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net