ಸೇತುವೆ ಪುನರ್ ನಿರ್ಮಾಣಕ್ಕೆ ಆಗ್ರಹ

New Lingaraj nagar new
Published on

ಹುಬ್ಬಳ್ಳಿ : ಇಲ್ಲಿನ ಲಿಂಗರಾಜನಗರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಹಾಗೂ ನಾಗರಿಕರು ಜಿಲ್ಲಾಧಿಕಾರಿ ದಿವ್ಯಪ್ರಭು ಅವರನ್ನು ಮಂಗಳವಾರ ಭೇಟಿ ಮಾಡಿ, ಬಡಾವಣೆಯ ಕಿರು ಸೇತುವೆ ಪುನರ್ ನಿರ್ಮಾಣ ಮಾಡಲು ವಿನಂತಿಸಿದರು.

ಇತ್ತೀಚಿನ ಅತಿವೃಷ್ಟಿಯಿಂದ ಲಿಂಗರಾಜ ನಗರ ಮತ್ತು ವಿದ್ಯಾನಗರ ಸಂರ್ಪಸುವ ಕಿರು ಸೇತುವೆ ಬಿರುಕು ಬಿಟ್ಟಿದ್ದು, ಸಂಪರ್ಕ ಸ್ಥಗಿತಗೊಂಡಿದೆ. ಉತ್ತರಾದಿ ಮಠ, ರಂಭಾಪುರಿ ಕಲ್ಯಾಣ ಮಂಟಪ, ರಾಮಕೃಷ್ಣ ಆಶ್ರಮ, ಬಿವಿಬಿ ಕಾಲೇಜು ಇನ್ನಿತರ ಸ್ಥಳಗಳಿಗೆ ಸುತ್ತು ಹಾಕಿ ಸಂಚರಿಸಬೇಕಾಗಿದೆ ಎಂದು ತಿಳಿಸಿದರು.

ಈ ಸೇತುವೆಯನ್ನು ತುರ್ತಾಗಿ ದುರಸ್ತಿ ಅಥವಾ ಪುನರ್ ನಿಮಾಣ ಮಾಡಲು ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ದಿವ್ಯ ಪ್ರಭು, ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ, ಕ್ರಮ ಕೈಗೊಳ್ಳುವ ಭರವಸೆ ನೀಡಿದದರು. ಅಪರ ಜಿಲ್ಲಾಧಿಕಾರಿ ಗೀತಾ ಅವರನ್ನು ಸಹ ಇದೇ ಸಂದರ್ಭದಲ್ಲಿ ಭೇಟಿ ಮಾಡಿದರು.

ಲಿಂಗರಾಜನಗರ ನಿವಾಸಿಗಳಾದ ಸುಚಿತ ಅಂಗಡಿ, ವಿನಯ ಲಿಂಗರಡ್ಡಿ, ಶಿವಕುಮಾರ ಪೊಲೀಸ್ ಪಾಟೀಲ, ಪ್ರಶಾಂತ ಚವಡಾಪುರ, ಜಿ.ಸಿ. ಹಿರೇಮಠ, ಎಸ್. ಎಸ್. ಪಾಟೀಲ, ಸಿದ್ದು ಕಪ್ಪಾಳಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net