ಟಿಸಿ ದುರಸ್ತಿ ಮಾಡಲು ಲಂಚಕ್ಕೆ ಬೇಡಿಕೆ

21-pnp 1
?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on


ಪಾಂಡವಪುರ : ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪರಿವರ್ತಕ ಅಳವಡಿಸಲು ಮತ್ತು ದುರಸ್ತಿಗೆ ಸೆಸ್ಕ್ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುತ್ತಾರೆ ಎಂದು ರೈತ ಅಂದಾನಿಗೌಡ ಆರೋಪಿಸಿದರು.


ಪಟ್ಟಣದ ಸೆಸ್ಕ್ ಉಪವಿಭಾಗೀಯ ಕಚೇರಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಚಿಕ್ಕಾಡೆ ಗ್ರಾಮದ ರೈತ ಅಂದಾನಿಗೌಡ, ಕಾರ್ಯನಿರ್ವಾಹಕ ಇಂಜಿನಿಯರ್ ವಿನೂತಾ ಅವರಿಗೆ ಸೆಸ್ಕ್ ಅಧಿಕಾರಿಗಳ ವಿರುದ್ಧ ದೂರು ನೀಡಿದರು.


ವಿದ್ಯುತ್ ಲೈನ್‌ನಲ್ಲಿ ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ಈ ಬಗ್ಗೆ ದೂರು ನೀಡಲು ಶಾಖಾಧಿಕಾರಿಗಳಿಗೆ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ವಿದ್ಯುತ್ ಲೈನ್‌ಮ್ಯಾನ್‌ಗಳು ನಿಗಧಿತ ಸ್ಥಳದಲ್ಲಿ ಲಭ್ಯವಿರುವುದಿಲ್ಲ. ಅಧಿಕಾರಿಗಳ ಉದಾಸೀನಾತೆಯಿಂದ ರೈತರು ಸಮಸ್ಯೆ ಎದುರಿಸಿಬೇಕಾಗಿದೆ ಎಂದು ಆರೋಪಿಸಿದರು.


ವಿದ್ಯುತ್ ಪರಿವರ್ತಕ ಸುಟ್ಟುಹೋದರೆ ತಿಂಗಳುಗಟ್ಟಲೇ ದುರಸ್ತಿ ಮಾಡದೇ ವಿನಾಕಾರಣ ಕಚೇರಿಗೆ ಅಲೆಸುವುದು ಸರ್ವೇ ಸಾಮಾನ್ಯವಾಗಿದೆ. ಹಣ ನೀಡಿದವರಿಗೆ ಕೇವಲ ಒಂದೆರಡು ದಿನಗಳಲ್ಲಿ ದುರಸ್ತಿ ಮಾಡಿಕೊಡಲಾಗುತ್ತದೆ. ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆ ಬೆಳೆದು ಸೆಸ್ಕ್ ಅಧಿಕಾರಿಗಳ ನಿರ್ಲಕ್ಷದಿಂದ ರೈತ ಬೆಳೆ ಕಳೆದುಕೊಳ್ಳಬೇಕಾ ಎಂದು ಪ್ರಶ್ನಿಸಿದರು.

ಜನರೇ ಇಲ್ಲದ ಜನ ಸಂಪರ್ಕ ಸಭೆ : ಸೆಸ್ಕ್ ಇಲಾಖೆ ಅಧಿಕಾರಿಗಳು ಮಾಸಿಕವಾಗಿ ನಡೆಸುವ ಜನಸಂಪರ್ಕ ಸಭೆ ಮಾಹಿತಿ ರೈತರಿಗೆ ಸಿಗದ ಪರಿಣಾಮ ಜನಸಂಪರ್ಕ ಸಭೆ ಕೇವಲ ಕಚೇರಿಯ ದಾಖಲೆಗಾಗಿ ತೆಗೆಯುವ ಫೋಟೋ ಎಂಬಂತಾಗಿದೆ.

ಶಾಮಿಯಾನ ಹಾಕಿಕೊಂಡು ಕೇವಲ ನಾಲ್ಕೈದು ಅಧಿಕಾರಿಗಳು ಕುಳಿತು 10 ನಿಮಿಷ ಚರ್ಚಿಸಿ ಸಭೆ ಮುಗಿಸುವುದಾದರೆ ಯಾವ ಪುರುಷಾರ್ಥಕ್ಕೆ ಸಭೆ ನಡೆಸಬೇಕು. ಸರ್ಕಾರ ನಿಗಧಿಪಡಿಸಿರುವಂತೆ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಸುತ್ತಿಲ್ಲ. ಪಟ್ಟಣ ವ್ಯಾಪ್ತಿಯಲ್ಲೂ ಆಗಾಗ್ಗೆ ವಿದ್ಯುತ್ ಕಡಿತಗೊಳಿಸುವ ಮೂಲಕ ಅಘೋಷಿತ ಲೋಡ್‌ಶೆಡ್ಡಿಂಗ್ ಮಾಡಲಾಗುತ್ತಿದೆ ಎಂಬ ದೂರುಗಳು ವ್ಯಕ್ತವಾದವು.


ಮಾಸಿಕ ಸಭೆ ನಡೆಸುವುದಾದರೆ ಒಂದು ವಾರ ಮುಂಚಿತವಾಗಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರಪತ್ರಗಳನ್ನು ಹಂಚಿಸಿ ಪ್ರಕಟಣೆಯ ಫಲಕದಲ್ಲಿ ಪ್ರಕಟಿಸಿ, ಸಾಧ್ಯವಾದರೆ ಆಟೋ ಪ್ರಚಾರ ಮಾಡಿಸಬೇಕು. ಅದನ್ನು ಬಿಟ್ಟು ಏಕಾಏಕಿ ಸಾರ್ವಜನಿಕರಿಗೆ ಯಾವುದೇ ಮಾಹಿತಿ ಇಲ್ಲದೆ ಸಭೆ ನಡೆಸಿದರೆ ಏನು ಪ್ರಯೋಜನವಿಲ್ಲ ಎಂದು ಗ್ರಾಹಕ ಕುಮಾರ್ ದೂರಿದರು.


ಎಇಇ ವಿ.ಪುಟ್ಟಸ್ವಾಮಿ, ಎಇ (ತಾಂತ್ರಿಕ) ರೂಪಿಣಿ, ಎಇಗಳಾದ ಸುಷ್ಮಾ, ಸತೀಶ್, ಜೆಇಗಳಾದ ಎ.ಬಿ.ಕಿರಣ್‌ಕುಮಾರ್, ವೈ.ಎಸ್.ಮುರುಳಿ, ಎಂ.ಬಿ.ಚಲುವರಾಜು, ರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net