ಮದ್ಯ ಮಾರಾಟ ನಿಷೇಧಕ್ಕೆ ಆಗ್ರಹ

20blh2 ಆಕ್ರಮ ಸರಾಯಿ
Published on

ಬೈಲಹೊಂಗಲ: ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಮಹಿಳೆಯರು ಪಿಡಿಒ ಭಾಗ್ಯಶ್ರೀ ಬ್ಯಾಹಟ್ಟಿ ನೇತೃತ್ವದಲ್ಲಿ ತಹಸೀಲ್ದಾರ್​ ಹಣಮಂತ ಶಿರಹಟ್ಟಿ ಅವರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ದಲಿತ ರಣಾ ವೇದಿಕೆ ಜಿಲ್ಲಾಧ್ಯ ಪ್ರಭಾಕರ ಭಜಂತ್ರಿ ಮಾತನಾಡಿ, ಗೋವನಕೊಪ್ಪದಲ್ಲಿ ಹಲವು ವರ್ಷಗಳಿಂದ ಅಕ್ರಮವಾಗಿ ಮದ್ಯ ಮಾರಾಟ ಅವ್ಯಾಹತವಾಗಿ ನಡೆದಿದ್ದು, ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಕೆಲವು ಅಧಿಕಾರಿಗಳು ಕೂಡ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.

ಪಾರವ್ವ ಕೆಂಚನಗೌಡರ ಮಾತನಾಡಿ, ಗ್ರಾಮದಲ್ಲಿ 12 ಕ್ಕೂ ಹೆಚ್ಚು ಜನ ಮದ್ಯ ಮಾರಾಟ ಮಾಡುತ್ತಿದ್ದು, ನಮ್ಮ ಕುಟುಂಬಗಳು ಬೀದಿಗೆ ಬರುತ್ತಿವೆ. ನಮ್ಮ ಪತಿ, ಮಕ್ಕಳು ನಿತ್ಯ ಕುಡಿದು ಜಗಳ ಮಾಡುತ್ತಿದ್ದಾರೆ. ಇದರಿಂದ ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ ಎಂದು ಅಲವತ್ತುಕೊಂಡರು.

ರತ್ನವ್ವ ಸಂಭೋಜಿ, ಕೀರವ್ವ ಸಂಭೋಜಿ, ಶಾಂತವ್ವ ಬಾಗಲಕೋಟಿ, ರ್ಜಾನಾ ಅನ್ಸಾರೆ, ಜೆಬೂನಬಿ ತಹಶೀಲ್ದಾರ, ಈರವ್ವ ಮಾಟೋಳ್ಳಿ, ಮಮತಾಜ್​ ತಹಶೀಲ್ದಾರ, ಚನ್ನವ್ವ ಮಲಕಿನಕೊಪ್ಪ, ಬಸವ್ವ ಬೆಣ್ಣಿ, ಮಹಾದೇವಿ ಸಂಭೋಜಿ, ಗಂಗವ್ವ ಅನಿಕಿವಿ, ನಿರ್ಮಲಾ ಕಾಡಸಿದ್ದನ್ನವರ, ಗ್ರಾಪಂ ಸದಸ್ಯರಾದ ಬಸವರಾಜ ಜಡಗನ್ನವರ, ಲಿಂಗನಗೌಡ ಪಾಟೀಲ, ಪಿಎಸ್​ಐ ಗಂಗಾಧರ ಹಂಪನ್ನವರ, ಅಬಕಾರಿ ಪಿಎಸ್​ಐ ವೀರೇಶ ಯರಗೊಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net