ಮತಾಂತರ ನಿಷೇಧಕ್ಕೆ ಆಗ್ರಹ: ಆರ್​ಎಸ್​ಎಸ್​ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಒತ್ತಾಯ

Dattatreya
Published on

ಧಾರವಾಡ: ಮತೀಯ ಅಲ್ಪಸಂಖ್ಯಾತರು ತಮ್ಮ ಸಂಖ್ಯೆ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಒತ್ತಾಯಪೂರ್ವಕ ಮತಾಂತರ ಮಾಡಿಸುವುದನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂ ವಿರೋಧಿಸುತ್ತದೆ ಎಂದು ಆರ್​ಎಸ್​ಎಸ್​ ಸರ ಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ದತ್ತಾತ್ರೇಯ ಹೊಸಬಾಳೆ ತಿಳಿಸಿದರು.

ಇಲ್ಲಿಯ ರಾಷ್ಟ್ರೊತ್ಥಾನ ವಿದ್ಯಾ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಆರ್​ಎಸ್​ಎಸ್​ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಬೈಠಕ್​ನ ಕೊನೇ ದಿನವಾದ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವ&ಇಚ್ಛೆಯಿಂದ ಮತಾಂತರವಾದರೆ ನಮ್ಮ ಅಭ್ಯಂತರವಿಲ್ಲ. ಆದರೆ ಆಮಿಷ ಒಡ್ಡಿ, ಒತ್ತಾಯಪೂರ್ವಕ ಮತಾಂತರ ಮಾಡುವುದನ್ನು ಸಹಿಸಲಾಗದು. ಇದು ಹಿಂದುಗಳ ಸಂಖ್ಯೆ ಕಡಿಮೆಗೊಳಿಸುವ ಅನೈತಿಕ ಕ್ರಮವಾಗಿದೆ ಎಂದು ದೂರಿದರು.

ಈಗಾಗಲೇ ಹಿಮಾಚಲ ಪ್ರದೇಶದ ಕಾಂಗ್ರೆಸ್​ ಸರ್ಕಾರ ಸೇರಿ ಹತ್ತು ರಾಜ್ಯಗಳು ಮತಾಂತರ ನಿಷೇಧ ಕಾಯ್ದೆ ಪಾಸ್​ ಮಾಡಿವೆ. ಕರ್ನಾಟಕದಲ್ಲೂ ಕಾಯ್ದೆ ಪಾಸಾಗಲಿ. ಅಗತ್ಯ ಬಿದ್ದರೆ ತಿದ್ದುಪಡಿ ಮಾಡಬಹುದು. ಕಾಯ್ದೆ ಬರುವ ಮುಂಚೆಯೇ ವಿರೋಧ ಮಾಡುವುದು ಸರಿಯಲ್ಲ ಎಂದರು.

ಜನಸಂಖ್ಯೆ ನೀತಿ ಒಂದೇ ಇರಲಿ: ದೇಶದ ಭೌಗೋಳಿಕ ವಿಸ್ತಾರ, ನೈಸರ್ಗಿಕ ಸಂಪನ್ಮೂಲ ಆಧರಿಸಿ ಜನಸಂಖ್ಯೆ ಇರಬೇಕು. ಜನಸಂಖ್ಯಾ ನೀತಿ ಇಡೀ ದೇಶಕ್ಕೆ ಎಲ್ಲ ಸಮುದಾಯಗಳಿಗೆ ಅನ್ವಯವಾಗುವಂತೆ ಏಕರೂಪವಾಗಿರಲಿ ಎಂಬುದು ಸಂದ ನಿಲುವು. ಸಂವು ಹಿಂದೆಯೇ ಈ ಬಗ್ಗೆ ಗೊತ್ತುವಳಿ ಸ್ವೀಕರಿಸಿದ್ದು, ಸರಸಂ ಚಾಲಕ ಮೋಹನ ಭಾಗವತ ಇದನ್ನೇ ಪುನರುಚ್ಚರಿಸಿದ್ದಾರೆ. ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವುದಾಗಿ ಸರ್ಕಾರ ಈಗಾಗಲೇ ಹೇಳಿದೆ. ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಅದು ಸಂಹಿತೆಯನ್ನು ಜಾರಿಗೆ ತರಬಹುದು. ಈ ಬಗ್ಗೆ ಏನು ಮಾಡುತ್ತದೆಯೋ ನೋಡೋಣ ಎಂದರು.
ಭಾವನೆಗಳಿಗೆ ಧಕ್ಕೆಯಾದರೆ ಪ್ರತಿಕ್ರಿಯೆ ಬರುವುದು ಸಹಜ. ಆದರೆ, ನೈತಿಕ ಪೊಲೀಸ್​ಗಿರಿ ಹೆಸರಿನಲ್ಲಿ ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ತಪ್ಪು. ನೈತಿಕ ಪೊಲೀಸ್​ಗಿರಿ ಕುರಿತು ಮುಖ್ಯಮಂತ್ರಿ ಕ್ರಿಯೆಗೆ ಪ್ರತಿಕ್ರಿಯೆ ಎಂದು ಹೇಳಿದ್ದು ಯಾವ ಆಧಾರದಲ್ಲಿ ಎಂಬುದು ಗೊತ್ತಿಲ್ಲ ಎಂದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ವ್ಯಾಟಿಕನದಲ್ಲಿ ಪೋಪ್​ ಭೇಟಿಯಾಗಿ ಮಾತುಕತೆ ನಡೆಸಿದ ಕುರಿತ ಪ್ರಶ್ನೆಗೆ, ಒಂದು ದೇಶದ ಪ್ರಧಾನಿ ಬೇರೆ ರಾಷ್ಟ್ರಗಳ ಮುಖ್ಯಸ್ಥರನ್ನು ಭೇಟಿ ಮಾಡಿ ಚರ್ಚಿಸಿದರೆ ದೇಶದ ಗೌರವ ಮತ್ತಷ್ಟು ಹೆಚ್ಚುತ್ತದೆ. ಇದರಲ್ಲಿ ತಪ್ಪೇನಿಲ್ಲ ಎಂದರು.

ಸಂದ ಅ.ಭಾ. ಪ್ರಚಾರ ಪ್ರಮುಖ ಸುನೀಲ ಅಂಬೇಕರ, ಸಹ ಪ್ರಚಾರ ಪ್ರಮುಖ ನರೇಂದ್ರಕುಮಾರ ಠಾಕೂರ, ಅಲೋಕಕುಮಾರ ಸುದ್ದಿಗೋಷ್ಠಿಯಲ್ಲಿದ್ದರು.

3 ವರ್ಷದ ಕಾರ್ಯ ವಿಸ್ತಾರದ ಚರ್ಚೆ
ಮುಂದಿನ ಮೂರು ವರ್ಷಗಳ ಕಾಲ ಆರ್​ಎಸ್​ಎಸ್​ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಕಾರ್ಯಕಾರಿ ಮಂಡಳಿ ಬೈಠಕ್​ನಲ್ಲಿ ಚರ್ಚೆಯಾಗಿದೆ. ಸಂದ ಚಟುವಟಿಕೆಗಳನ್ನು ದೇಶದ ಎಲ್ಲ ಭಾಗಗಳಿಗೆ ವಿಸ್ತರಿಸಿ ಹೆಚ್ಚು ಜನರನ್ನು ಒಳಗೊಳ್ಳುವಂತೆ ಕಾರ್ಯಕ್ರಮ ರೂಪಿಸಲಾಗಿದೆ ಎಂದು ದತ್ತಾತ್ರೇಯ ಹೊಸಬಾಳೆ ಹೇಳಿದರು. ಕರೊನಾದಿಂದ ಸ್ಥಗಿತಗೊಂಡಿದ್ದ ಶಾಖೆಗಳು ಪುನ@ ಆರಂಭವಾಗಿವೆ. ಲಾಕ್​ಡೌನ್​ ಅವಧಿಯಲ್ಲೂ ಲಕ್ಷಾಂತರ ಕಾರ್ಯಕರ್ತರು ಸೇವೆ ಮಾತ್ರ ನಿಲ್ಲಿಸಿರಲಿಲ್ಲ. ಕೋವಿಡ್​ ಬಗ್ಗೆ ಜನ ಜಾಗೃತಿ, ಸೋಂಕಿತರ ಚಿಕಿತ್ಸೆ ಹೀಗೆ ಹತ್ತು ಹಲವು ಕಾರ್ಯಗಳಲ್ಲಿ ತೊಡಗಿದ್ದರು. ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಸಂವು, ಸ್ವಾತಂತ್ರ ಹೋರಾಟದಲ್ಲಿ ಬಲಿದಾನ ಮಾಡಿ ಇತಿಹಾಸದಲ್ಲಿ ದಾಖಲಾಗದ ವೀರರ ಬಗ್ಗೆ ಜನರಿಗೆ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ. ಕಾಲಾಪಾನಿ ಶಿೆಗೆ ಗುರಿಯಾದ ಅನೇಕರ ಬಗ್ಗೆ ಇತಿಹಾಸದಲ್ಲಿ ದಾಖಲಿಲ್ಲ. ಅಂತಹವರ ಬಗ್ಗೆ ಸಂ ತಿಳಿಸಿಕೊಡಲಿದೆ. 75 ವರ್ಷದಲ್ಲಿ ದೇಶ ಸಾಕಷ್ಟು ಅಭಿವೃದ್ಧಿ ಕಂಡಿದೆ. ಮುಂದಿನ ದಿನಗಳಲ್ಲಿ ಏನೆಲ್ಲ ಕಾರ್ಯಕ್ರಮಗಳನ್ನು ನಡೆಸಬಹುದು ಎಂಬ ಚಿಂತನೆ ನಡೆದಿದೆ. ಸಮಾಜ ಪತಿವರ್ತನೆಗಾಗಿ ಭ್ರೂಣ ಹತ್ಯೆ, ಅಸಶ್ಯತೆ ಸೇರಿ ಇತರ ಸಮಸ್ಯೆಗಳನ್ನು ದೂರ ಮಾಡಿ ಸಕಾರಾತ್ಮಕ ಬದಲಾವಣೆ ತರಲು ಉದ್ದೇಶಿಸಲಾಗಿದೆ. ಕರೊನಾದಿಂದ ಉದ್ಯೋಗ ಕಳೆದುಕೊಂಡಿರುವವರು ರೋಜಗಾರ ಸೃಜನ ಎಂಬ ಯೋಜನೆ ಮೂಲಕ ಸ್ಥಾನಿಯ ಕೌಶಲದ ಆಧಾರದ ಮೇಲೆ ಸ್ವಾವಲಂಬಿ ಜೀವನ ನಡೆಸಿ ಆರ್ಥಿಕ ಚೇತರಿಗೆ ಕಾಣುವಂತೆ ಯೋಜನೆ ರೂಪಿಸಲಾಗಿದೆ ಎಂದರು.

ಶಾಖೆಗಳ ಮಾಹಿತಿ
ದೇಶದ 34,000 ಸ್ಥಳಗಳಲ್ಲಿ ನಿತ್ಯ ಶಾಖೆ, 12,780 ಕಡೆಗಳಲ್ಲಿ ವಾರದ ಹಾಗೂ 7900 ಸ್ಥಳಗಳಲ್ಲಿ ತಿಂಗಳ ಶಾಖೆಗಳು ಸೇರಿ ಒಟ್ಟು 54382 ಶಾಖೆಗಳು ನಡೆಯುತ್ತಿವೆ. 2025ಕ್ಕೆ ಸಂಕ್ಕೆ 100 ವರ್ಷ ಪೂರೈಸಲಿರುವ ಹಿನ್ನೆಲೆಯಲ್ಲಿ ಶಾಖೆಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ದತ್ತಾತ್ರೇಯ ಹೊಸಬಾಳೆ ತಿಳಿಸಿದರು.
ಕೊನೇ ಕ್ಷಣದ ನಿಷೇಧ ಸರಿಯಲ್ಲ... ದೀಪಾವಳಿ ಬಂದಾಗ ಮಾತ್ರ ಪಟಾಕಿ ಹಾರಿಸಿದರೆ ಪರಿಸರ ಮಾಲಿನ್ಯವಾಗುತ್ತದೆ ಎಂಬ ಕೂಗು ಕೇಳಿ ಬರುತ್ತಿದೆ. ಪರಿಸರ ರಸಲು ಪಟಾಕಿ ನಿಷೇಧಿಸುವುದಾದರೆ ಸಮಗ್ರವಾಗಿ ಪರಿಸರ ತಜ್ಞರೊಂದಿಗೆ ಸುದೀರ್ ಚರ್ಚೆ ಮಾಡಿ ರ್ನಿಣಯ ಕೈಗೊಳ್ಳಲಿ. ಕೊನೇ ಣದಲ್ಲಿ ನಿಷೇಧ ಹೇರುವುದರಿಂದ ಪಟಾಕಿ ತಯಾರಕರು, ಮಾರಾಟಗಾರರ ಜೀವನೋಪಾಯಕ್ಕೆ ಕುತ್ತು ತರುತ್ತದೆ. ಮೊದಲೇ ಸೂಕ್ತ ರ್ನಿಣಯ ಕೈಗೊಳ್ಳಬೇಕಲ್ಲದೆ, ಆ ವ್ಯಾಪರವನ್ನೇ ನಂಬಿದವರಿಗೆ ಪರ್ಯಾಯ ವ್ಯವಸ್ಥೆ ಸಹ ಮಾಡಿಕೊಡಬೇಕು ಎಂದು ಹೊಸಬಾಳೆ ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net