ದೇವದುರ್ಗ ಶಾಸಕಿ ಪುತ್ರನ ಬಂಧನಕ್ಕೆ ಒತ್ತಾಯ

raichur
raichur
Published on

 ರಾಯಚೂರು ಜಿಲ್ಲೆಯ ಕಾಕರಗಲ್ ಬಳಿಯ ಟೋಲ್‌ಗೇಟ್‌ನ್ನು ಶಾಸಕಿ ಕರೇಮ್ಮ ನಾಯಕ ಪುತ್ರ ಇತ್ತೀಚಿಗೆ ಧ್ವಂಸಗೊಳಿಸಿದ್ದು ಖಂಡನೀಯವಾಗಿದೆ. ಕೂಡಲೇ ಪೊಲೀಸರು ಸಂತೋಷ ನಾಯಕನನ್ನು ಬಂಽಸಬೇಕು ಎಂದು ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ಶ್ರೀದೇವಿ ನಾಯಕ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇವದುರ್ಗ ತಾಲೂಕಿನಲ್ಲಿ ಶಾಸಕಿ ಪುತ್ರನ ಗೂಂಡಾ ವರ್ತನೆ ಹೆಚ್ಚಾಗಿದೆ. ಈ ಹಿಂದೆ ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿರುವ ಬಗ್ಗೆಯೂ ಆರೋಪಗಳಿದ್ದು, ಇದೀಗ ಟೋಲ್‌ಗೇಟ್ ಧ್ವಂಸಗೊಳಿಸಿ ಪುಂಡಾಟ ಮೆರೆದಿದ್ದಾನೆ ಎಂದು ದೂರಿದರು.

ಟೋಲ್ ಗೇಟ್ ಜನರ ತೆರಿಗೆಯಿಂದಾದ ಸರ್ಕಾರದ ಆಸ್ತಿಯಾಗಿದ್ದು, ಜನಪ್ರತಿನಿಽಯ ಪುತ್ರ ಈ ರೀತಿಯಾಗಿ ಗೂಂಡಾವರ್ತನೆ ತೋರಿರುವುದು ಸರಿಯಲ್ಲ. ರೈತರ ಮೇಲಿನ ಕಾಳಜಿಯಿಂದ ಟೋಲ್ ಗೇಟ್ ಮುಂಚುವAತೆ ಶಾಸಕಿಯ ಪುತ್ರ ಹಾಗೂ ಬೆಂಬಲಿಗರು ಹೋರಾಟ ಮಾಡುತ್ತಿಲ್ಲ ಬದಲಾಗಿ ತಾವು ನಡೆಸುವ ಮರಳು ಸಾಗಾಣಿಕೆ ಸೇರಿ ಅಕ್ರಮ ದಂದೆಗಳಿಗೆ ತೊಂದರೆ ಉಂಟಾಗುತ್ತದೆ

ಎAಬ ಉದ್ದೇಶದಿಂದ ಈ ರೀತಿ ದಾಳಿಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿ ಮಾಡಲಾಗುವುದು. ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿಗಳು ಕೂಡಲೇ ಆರೋಪಿಯನ್ನು ಬಂದಿಸಬೇಕು ಇಲ್ಲದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಮಾಲಾ ಭಜಂತ್ರಿ, ಮಂಜುಳಾ, ಖಾಸಿಂಬೀ, ಲಕ್ಷ್ಮೀ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net