ಹಲ್ಲೆಕೋರರ ಬಂಧನಕ್ಕೆ ಒತ್ತಾಯ

Gram Pancahayat Protest 1
Published on

ಬೆಳಗಾವಿ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ೇಮಾಭಿವೃದ್ಧಿ ಸಂದ ನೇತೃತ್ವದಲ್ಲಿ ಗ್ರಾಪಂ ನೌಕರರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನ ಸೇರಿ ಸಾರ್ವಜನಿಕ ಕೆಲಸಗಳಿಗಾಗಿ ದಿನದ 24 ಗಂಟೆ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಪಂ ನೌಕರರಿಗೆ ಸೂಕ್ತ ಭದ್ರತೆ ಇಲ್ಲ. ಪದೇ ಪದೆ ಗ್ರಾಪಂ ನೌಕರರ ಮೇಲೆ ಹಲ್ಲೆಗಳು, ಜೀವ ಬೇದರಿಕೆ ನಡೆಯುತ್ತಿದ್ದು, ಗ್ರಾಮೀಣಾಭಿವೃದ್ಧಿ ಕೆಲಸಗಳ ಮೇಲೆ ಪರಿಣಾಮ ಬೀರಿದೆ. ಅಲ್ಲದೆ, ಗ್ರಾಪಂಗಳಲ್ಲಿ ನೌಕರರ ಕೆಲಸ ಮಾಡಲು ಭಯಪಡುವಂತೆ ವಾತಾವರಣ ಸೃಷ್ಟಿಯಾಗಿದೆ ಎಂದು ದೂರಿದರು. ಕಳೆದ ವಾರ ಯರಗಟ್ಟಿ ತಾಲೂಕಿನ ಮಾಡಮಗೇರಿ ಗ್ರಾಪಂನಲ್ಲಿ ಕಾನೂನು ಬಾಹಿರವಾಗಿ ಇಸ್ವತ್ತು ನೀಡುವಂತೆ ಕೆಲವರು ಪಿಡಿಒ ಮೇಲೆ ಒತ್ತಡ ಹೇರಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ಮಾರಣಾಂತಿಕ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಲಾಗಿದೆ. ಬೆಳಗಾವಿ ತಾಲೂಕಿನ ಅಂಬೇವಾಡ ಗ್ರಾಪಂ ಕಾರ್ಯದರ್ಶಿ ಮತ್ತು ಚಿಕ್ಕೋಡಿ ತಾಲೂಕಿನ ಚಿಕ್ಕಲವಾಳ ಪಿಡಿಒ ಮೇಲೂ ಮಾರಣಾಂತಿಕ ಹಲ್ಲೆ ನಡೆದಿತ್ತು. ಸಂಬಂಧಿತ ಪೊಲೀಸ್​ ಠಾಣೆಗಳಲ್ಲಿ ಎಫ್​ಐಆರ್​ ದಾಖಲಿಸಿದರೂ ಆರೋಪಿಗಳ ವಿರುದ್ಧ ಕ್ರಮವಾಗಿಲ್ಲ ಎಂದು ಆರೋಪಿಸಿದರು. ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಹಲ್ಲೆ ನಡೆಸಿದವರನ್ನು ತಕ್ಷಣವೇ ಬಂಧಿಸಬೇಕು. ಇಲ್ಲದಿದ್ದರೆ ಕರ್ತವ್ಯ ಬಹಿಷ್ಕರಿಸಿ ನಿರಂತರ ಹೋರಾಟ ಕೈಗೊಳ್ಳಲಾಗುವುದು ಎಂದು ನೌಕರರು ಎಚ್ಚರಿಸಿದರು. ಸಂದ ಜಿಲ್ಲಾಧ್ಯ ಆನಂದ ಹೊಳೆನ್ನವರ, ಉಸ್ಮಾನ್​ ನದಾಫ್​, ಶ್ರೀದೇವಿ ಮಡಿವಾಳರ, ಗೋಪಾಲ ಗುಡಸಿ, ಮಲ್ಲಪ್ಪ ಹಾರುಗೊಪ್ಪ ಇತರರಿದ್ದರು. ಪಿಡಿಒ ಸೇರಿ ಗ್ರಾಪಂ ನೌಕರರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತೇನೆ. ಎಲ್ಲ ಗ್ರಾಪಂ ನೌಕರರಿಗೆ ಸೂಕ್ತ ರಕ್ಷಣೆಗೆ ಕ್ರಮ ವಹಿಸಲಾಗುವುದು.  ಮೊಹಮ್ಮದ್​ ರೋಷನ್​, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net