ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆಗೆ ಯತ್ನಿಸಿದವರ ಬಂಧಿಸಲು ಆಗ್ರಹ

udp-12-bjp
Published on

ಉಡುಪಿ: ಉದ್ಯಾವರದ ಬೊಳ್ಜೆ ಪರಿಸರದಲ್ಲಿ ಬಿಜೆಪಿ ಕಾರ್ಯಕರ್ತ ರಕ್ಷಿತ್ ಸಾಲಿಯಾನ್ ಇವರ ಮೇಲೆ ಅಪರಿಚಿತ ಮೂರು ಜನ ಮಾರಕಾಯುಧಗಳಿಂದ ಹಲ್ಲೆ ಮಾಡಲು ಯತ್ನಿಸಿದ ಘಟನೆ ನಡೆದಿದ್ದು, ಪ್ರಮುಖ ಆರೋಪಿಯನ್ನು ಬಂಧಿಸುವಂತೆ ಉಡುಪಿ ಎಸ್‌ಪಿ ಅಕ್ಷಯ್ ಅವರಿಗೆ ಕಾಪು ಮಂಡಲ ಬಿಜೆಪಿ ವತಿಯಿಂದ ಮನವಿ ಸಲ್ಲಿಸಲಾಯಿತು.

ಘಟನೆ ಬಗ್ಗೆ ಕಾಪು ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹಲವಾರು ದರೋಡೆ, ಕಳ್ಳತನ ಕೊಲೆ ಇತ್ಯಾದಿ ಆರೋಪಗಳ ಮೇಲೆ ದೂರು ದಾಖಲಾಗಿ ಜಾಮೀನಿನ ಮೇಲೆ ತಿರುಗಾಡುತ್ತಿರುವ ವಾದಿರಾಜ, ಅಭಿಶೇಕ್, ಮತ್ತು ರಂಜಿತ್ ಎಂಬವರು ಹಲ್ಲೆಗೆ ಯತ್ನಿಸಿರುವುದು ತನಿಖೆಯಲ್ಲಿ ತಿಳಿದು ಬಂದಿದೆ. ಈ ಕೃತ್ಯಕ್ಕೆ ಸ್ಥಳೀಯ ಕಾಂಗ್ರೆಸ್ ಮುಖಂಡ ನಿತಿನ ಜೆ. ಸಾಲಿಯಾನ್ ಸುಪಾರಿ ಕೊಟ್ಟಿರುವುದಾಗಿ ಆರೋಪಿಗಳು ಹೇಳಿಕೆ ನೀಡಿದ್ದು, ಮೂರ್ನಾಲ್ಕು ದಿನಗಳಾದರೂ ನಿತಿನ್ ಅವರನ್ನು ಬಂಧಿಸಿಲ್ಲ. ಹೀಗಾಗಿ ಪ್ರಮುಖ ಆರೋಪಿಯನ್ನು ಬಂದಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ ನಾಯಕ್, ಜಿಲ್ಲಾ ಬಿಜೆಪಿ ಮಹಿಳಾಮೋರ್ಚ ಅಧ್ಯಕ್ಷೆ ವೀಣಾ ಶೆಟ್ಟಿ, ಜಿಲ್ಲಾ ಪ್ರಕೊಷ್ಠಗಳ ಸಂಯೋಜಕ ವಿಜಯ್ ಕುಮಾರ್, ಉದ್ಯಾವರ ಮಹಾಶಕ್ತಿಕೇಂದ್ರ ಅಧ್ಯಕ್ಷ ರವಿ ಕೋಟ್ಯನ್, ಕಾಪು ಮಂಡಲ ಕಾರ್ಯದರ್ಶಿ ರಾಜೇಶ್ ಕುಂದರ್, ಪ್ರಮುಖರಾದ ಸಂತೋಷ್ ಸುವರ್ಣ, ಜಿತೇಂದ್ರ ಶೆಟ್ಟಿ, ಪ್ರಕಾಶ್ ಕುಮಾರ್, ರಮಾನಂದ, ಪ್ರವೀಣ್ ಪೂಜಾರಿ, ಉದ್ಯಾವರ ಪಂಚಾಯಿತಿ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್, ಯುವಮೋರ್ಚ ಅಧ್ಯಕ್ಷ ಸಚಿನ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net