ಸಮರ್ಪಕ ನೀರು ಪೂರೈಕೆಗೆ ಒತ್ತಾಯ

Demand for adequate water supply
ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಇಳಕಲ್ಲ ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ ಅವರಿಗೆ ವೆಲ್‌ಫೇರ್ ಪಾರ್ಟಿ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಅಬ್ದುಲ್ ರಜಾಕ್ ಕಲಾಲ್, ಅ್ಜಲ್ ಹುಮ್ನಾಬಾದ್, ಸಿರಾಜ ಹುಣಚಗಿ, ರಫೀಕ್ ಬಲ್ಗನೂರ್, ಲಾಲ್‌ಸಾಬ್ ಭಂಡಾರಿ, ಮುರ್ತುಜಾ ಸೈ ಇದ್ದಾರೆ.
Published on

ಇಳಕಲ್ಲ(ಗ್ರಾ): ನಗರದಲ್ಲಿ ನೀರಿನ ಸಮಸ್ಯೆ ನಿರಂತರವಾಗಿ ಮುಂದುವರಿದಿದ್ದರೂ ನಗರಸಭೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದಕ್ಕೆ ವೆಲ್‌ಫೇರ್ ಪಾರ್ಟಿ ತಾಲೂಕು ಘಟಕದ ಅಧ್ಯಕ್ಷ ಸಿರಾಜ್ ಹುಣಚಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರಸಭೆ ಕಾರ್ಯಾಲಯದಲ್ಲಿ ಪೌರಾಯುಕ್ತ ಶ್ರೀನಿವಾಸ ಜಾಧವ ಅವರಿಗೆ ಬುಧವಾರ ಮನವಿ ಸಲ್ಲಿಸಿ ಮಾತನಾಡಿದ ಅವರು, ನೀರಿನ ಸರಬರಾಜು ವ್ಯವಸ್ಥೆಯನ್ನು ತ್ವರಿತವಾಗಿ ಸುಧಾರಿಸಬೇಕು ಎಂದು ಒತ್ತಾಯಿಸಿದರು.

ವೆಲ್‌ಫೇರ್ ಪಾರ್ಟಿ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ರಜಾಕ್ ಕಲಾಲ್, ಉಪಾಧ್ಯಕ್ಷ ಅ್ಜಲ್ ಹುಮ್ನಾಬಾದ್, ರಫೀಕ್ ಬಲ್ಗನೂರ್, ಲಾಲ್‌ಸಾಬ್ ಭಂಡಾರಿ, ಮುರ್ತುಜಾ ಸೈ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net