ಹೆಚ್ಚುವರಿ ಬಸ್ ಸೌಲಭ್ಯಕ್ಕೆ ಒತ್ತಾಯ

SIRSI BUS TADE
Published on

ಶಿರಸಿ: ತಾಲೂಕಿನ ದಾಸನಕೊಪ್ಪ ಬನವಾಸಿ ನಡುವೆ ಸರಿಯಾದ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ಕಲಕರಡಿ ಬಳಿ ಸಾರ್ವಜನಿಕರು ಬಸ್ ಸಂಚಾರ ತಡೆ ನಡೆಸಿದರು.

ದಾಸನಕೊಪ್ಪದಿಂದ ಬನವಾಸಿವರೆಗೆ ಕಾಳಂಗಿ, ಬೆಳ್ಳನಕೇರಿ, ಮಡಕೇಶ್ವರ, ಹೊಸಕೊಪ್ಪ, ಕಿರವತ್ತಿ, ಹೆಬ್ಬತ್ತಿ, ರಾಮಾಪುರ, ಕಲಕರಡಿ, ಅಂಡಗಿ, ಚನ್ನಗಿರಿ, ಹಾಡಲಗಿ ಸೇರಿ ಹತ್ತಾರು ಹಳ್ಳಿಗಳಿವೆ. 200ಕ್ಕೂ ಅಧಿಕ ವಿದ್ಯಾರ್ಥಿಗಳು ಶಾಲೆ-ಕಾಲೇಜ್​ಗಳಿಗೆ ಹೋಗಲು ಬೆಳಗ್ಗೆ 8 ಗಂಟೆಗೆ ಬರುವ ದಾಸನಕೊಪ್ಪ ಬನವಾಸಿ ಬಸ್ ಅನ್ನು ನೆಚ್ಚಿಕೊಂಡಿದ್ದಾರೆ. ನಂತರ ಯಾವುದೇ ಬಸ್ ಸಂಚಾರ ಈ ಮಾರ್ಗದಲ್ಲಿ ಇಲ್ಲ. ಇಡೀ ದಿನಕ್ಕೆ ಒಂದು ಬಸ್ ಮಾತ್ರ ಇರುವುದರಿಂದ ವಿದ್ಯಾರ್ಥಿಗಳು ಅದೇ ಬಸ್​ಗೆ ಹೋಗುತ್ತಾರೆ. ಇಲ್ಲಿನ ವಿದ್ಯಾರ್ಥಿಗಳು ಅನಿವಾರ್ಯವಾಗಿ ನಿತ್ಯ ಸರ್ಕಸ್ ಮಾಡಿ, ಜೀವಾಪಾಯದ ನಡುವೆಯೇ ಬನವಾಸಿಗೆ ತೆರಳುತ್ತಿದ್ದಾರೆ. ಆದ್ದರಿಂದ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮತ್ತೊಂದು ಬಸ್ ವ್ಯವಸ್ಥೆ ಮಾಡಬೇಕು ಎಂದು ವಿದ್ಯಾರ್ಥಿಗಳ ಪಾಲಕರು ಒತ್ತಾಯಿಸಿದರು.

ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸುವ ಕುರಿತು ಅಧಿಕಾರಿಗಳು ಭರವಸೆ ನೀಡಿದ ಬಳಿಕ ಸಾರ್ವಜನಿಕರು ಬಸ್ ಸಂಚಾರ ತಡೆ ಕೈ ಬಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net