ಗಿಡ ನೆಡದೆ ಬಿಲ್ ಮಾಡಿಕೊಂಡವರ ವಿರುದ್ಧ ಕ್ರಮಕ್ಕೆ ಆಗ್ರಹ

16kkr2(6-25
ಕಿಕ್ಕೇರಿ ಹೋಬಳಿಯ ಊಗಿನಹಳ್ಳಿ ಗ್ರಾಮದಲ್ಲಿ ಗಿಡ ನೆಡದೆ ಅಕ್ರಮವಾಗಿ ಬಿಲ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟಿಸುತ್ತಿದ್ದ ಸ್ಥಳಕ್ಕೆ ಸುಷ್ಮಾ ಭೇಟಿ ನೀಡಿ ಚರ್ಚಿಸಿದರು. ಪುಟ್ಟಸ್ವಾಮಿ, ಬಸವರಾಜು, ದಿಲೀಪ್, ಮಹೇಶ್, ಸುರೇಶ್, ತಮ್ಮಯ್ಯ, ರವಿ, ಗಿರೀಶ್, ಉಮೇಶ್, ಮಹದೇವು ಮತ್ತಿತರರಿದ್ದರು.
Published on

ಕಿಕ್ಕೇರಿ : ಹೋಬಳಿಯ ಲಕ್ಷ್ಮೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಊಗಿನಹಳ್ಳಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಗಿಡ ನೆಡದೆ ಗಿಡ ನೆಟ್ಟಿರುವುದಾಗಿ ನಕಲಿ ದಾಖಲೆ ಸೃಷ್ಟಿಸಿ ಹಣ ದುರ್ಬಳಕೆ ಮಾಡಿರುವ ಪಿಡಿಒ ಹಾಗೂ ಜಾಬ್‌ಕಾರ್ಡುದಾರರ ವಿರುದ್ಧ ಕ್ರಮ ತೆಗೆದುಕೊಳ್ಳಲು ಮೀನಮೇಷ ಮಾಡುತ್ತಿರುವುದನ್ನು ಖಂಡಿಸಿ ಊಗಿನಹಳ್ಳಿ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.

ಲಕ್ಷ್ಮೀಪುರ ಗ್ರಾಪಂ ಕಚೇರಿ ಮುಂದೆ ಜಮಾಯಿಸಿದ ಗ್ರಾಮಸ್ಥರು ನಾಲ್ಕೈದು ದಿನಗಳ ಹಿಂದೆ ಈ ಕುರಿತು ಮನವಿ ಸಲ್ಲಿಸಿ ತನಿಖೆ ಮಾಡಲು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗಿತ್ತು. ಆದರೂ ಇದಕ್ಕೆ ಅಧಿಕಾರಿಗಳು ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ. ಯಾವುದೇ ಗಿಡ ನೆಡದಿರುವ ಕುರಿತು ವಿಡಿಯೋ ದಾಖಲೆ ಕೂಡ ನೀಡಲಾಗಿದೆ. ಸಂಬಂಧಪಟ್ಟ ಮೇಲಧಿಕಾರಿಗಳು ಸ್ಥಳಕ್ಕೆ ಬಾರದೆ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ಪರಿಸರಪ್ರೇಮಿ ವೆಂಕಟೇಶ್ ನೆಟ್ಟಿರುವ ಗಿಡಗಳನ್ನೇ ತೋರಿಸಿ ಬಿಲ್ ಮಾಡಿಕೊಂಡಿದ್ದಾರೆ. ಹೊಸಕೊಪ್ಪಲು ಕಟ್ಟೆ ಕೆಲಸ ಮಾಡದೆ, ರಸ್ತೆ ನಿರ್ಮಾಣ ಮಾಡದೆ ನಕಲಿ ದಾಖಲೆ ಸೃಷ್ಟಿಸಿಕೊಂಡಿದ್ದಾರೆ. ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು ತನಿಖೆ ಆಗಲೇಬೇಕು ಎಂದು ಪಟ್ಟು ಹಿಡಿದರು.

ವಿಷಯ ತಿಳಿದು ಸ್ಥಳಕ್ಕೆ ತಾಪಂ ಇಒ ಸುಷ್ಮಾ ಆಗಮಿಸಿ ದೂರು ನೀಡಿ ತನಿಖೆ ನಡೆಸಿ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.

ಪ್ರತಿಭಟನೆಯಲ್ಲಿ ಪುಟ್ಟಸ್ವಾಮಿ, ಬಸವರಾಜು, ದಿಲೀಪ್, ಮಹೇಶ್, ಸುರೇಶ್, ತಮ್ಮಯ್ಯ, ರವಿ, ಗಿರೀಶ್, ಉಮೇಶ್, ಮಹದೇವು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net