ಹಲ್ಲೆ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹ

Demand for action against the attackers
ಭೂಮಾಪಕ ಮಹಾಂತೇಶ ಸಜ್ಜನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ರಾಜ್ಯ ಭೂಮಾಪನ ಕಂದಾಯ ಮತ್ತು ಭೂ ದಾಖಲೆಗಳ ಕಾರ್ಯನಿರ್ವಾಹಕ ನೌಕರರ ಸಂಘದ ಜಿಲ್ಲಾ ಘಟಕದ ಸದಸ್ಯರು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು. ರಾಮು ರಾಠೋಡ, ಮೋಹನ ನಾಯಕ, ಎಸ್.ಡಿ. ಮಗ್ಗದ, ಜಿ.ಟಿ. ಗುಗ್ಗರಿ ಇತರರಿದ್ದರು.
Published on

ವಿಜಯಪುರ : ಲೋಣಿ ಬಿ.ಕೆ. ಗ್ರಾಮದಲ್ಲಿ ಭೂಮಾಪಕ ಮಹಾಂತೇಶ ಸಜ್ಜನ ಮೇಲೆ ಹಲ್ಲೆಮಾಡಿದವ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯ ಭೂಮಾಪನ ಕಂದಾಯ ಮತ್ತು ಭೂ ದಾಖಲೆಗಳ ಕಾರ್ಯನಿರ್ವಾಹಕ ನೌಕರರ ಸಂಘ ಜಿಲ್ಲಾ ಘಟಕದ ಸದಸ್ಯರು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ.

ಸಂಘದ ರಾಜ್ಯ ಉಪಾಧ್ಯಕ್ಷ ರಾಮು ರಾಠೋಡ ಮಾತನಾಡಿ, ತಹಸೀಲ್ದಾರ್‌ರ ಆದೇಶದ ಮೇರೆಗೆ ಮಹಾಂತೇಶ ಸಜ್ಜನ ಭೂಮಿ ಅಳತೆ ಮಾಡಲು ತೆರಳಿದ್ದರು. ಆ ಸಮಯದಲ್ಲಿ ಭೂಮಾಲೀಕ ವಿಕಾಸ ಪಾಟೀಲ ಹಾಗೂ ರವೀಂದ್ರ ಕಾಂಬಳೆ, ಸಿದ್ದರಾಮ ಉಟಗಿ, ಸಿದ್ದಲಿಂಗಪ್ಪ ಪಾಟೀಲ ಮಹಾಂತೇಶನ ಮೇಲೆ ಹಲ್ಲೆ ಮಾಡಿದ್ದಾರೆ. ಕರ್ತವ್ಯ ನಿರತ ಸರ್ಕಾರಿ ನೌಕರರ ಮೇಲೆ ಹಲ್ಲೆ ಮಾಡಿದ್ದು ಕಾನೂನು ಬಾಹಿರವಾಗಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಂಘದ ಜಿಲ್ಲಾಧ್ಯಕ್ಷ ಮೋಹನ ನಾಯಕ, ಎಸ್.ಡಿ. ಮಗ್ಗದ, ಜಿ.ಟಿ. ಗುಗ್ಗರಿ, ಸತೀಶ ಹಿಮಕರ, ಯಮನೇಶ ಬಿರಾದಾರ, ಭೀಮರಾಯ, ವಿಠ್ಠಲ ಅಥರ್ಗಾ, ಜಿ.ಎನ್. ಪಾಟೀಲ, ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net