ಆರ್‌ಟಿಒ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಸಾರಿಗೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಲೆನಾಡ ರಕ್ಷಣಾ ವೇದಿಕೆ ವತಿಯಿಂದ ಸಕಲೇಶಪುರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಸಾಗರ್ ಜಾನೇಕೆರೆ, ಮಂಜುದೇವ್, ಗೋಕುಲ್ ಇತರರು ಇದ್ದರು.
ಸಾರಿಗೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಲೆನಾಡ ರಕ್ಷಣಾ ವೇದಿಕೆ ವತಿಯಿಂದ ಸಕಲೇಶಪುರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಸಾಗರ್ ಜಾನೇಕೆರೆ, ಮಂಜುದೇವ್, ಗೋಕುಲ್ ಇತರರು ಇದ್ದರು.
Published on

ಸಕಲೇಶಪುರ: ಆರ್‌ಟಿಒ ಕಚೇರಿಯಲ್ಲಿ ದಲ್ಲಾಳಿಯೊಬ್ಬರ ಹುಟ್ಟುಹಬ್ಬ ಆಚರಣೆಗೆ ಅವಕಾಶ ಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಲೆನಾಡು ರಕ್ಷಣಾ ವೇದಿಕೆ ವತಿಯಿಂದ ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಕಚೇರಿಯಲ್ಲಿ ದಲ್ಲಾಳ್ಳಿಯೊಬ್ಬರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಕಚೇರಿಯನ್ನು ದಲ್ಲಾಳಿಮಯ ಮಾಡಲಾಗಿದೆ. ಇದರಿಂದಾಗಿ ಸಾರ್ವಜನಿಕರು ನೇರವಾಗಿ ಕಚೇರಿ ಕೆಲಸಕ್ಕೆ ಆಗಮಿಸದಂತೆ ಅಧಿಕಾರಿಗಳು ಪರೋಕ್ಷವಾಗಿ ಸಂದೇಶ ನೀಡಿದಂತಿದೆ. ಈ ಕಾನೂನುಬಾಹಿರ ಕೃತ್ಯವೆಸಗಿರುವ ಸಾರಿಗೆ ಅಧಿಕಾರಿ, ಬ್ರೇಕ್ ಇನ್‌ಸ್ಪೆಕ್ಟರ್ ಹಾಗೂ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕೃತ್ಯ ನಡೆದ ಮರುದಿನವೇ ಸಂಘಟನೆಯಿಂದ ಈ ಸಂಬಂಧ ಮನವಿ ಮಾಡಲಾಗಿತ್ತು. ಆದರೆ 8 ದಿನಗಳು ಕಳೆದರೂ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಇಡೀ ಜಿಲ್ಲಾಡಳಿತ ಭ್ರಷ್ಟಚಾರಕ್ಕೆ ಮಣೆ ಹಾಕುತ್ತಿದೆ ಎಂದೇ ಭಾವಿಸಬೇಕಿದೆ. ಆದ್ದರಿಂದ ಇನ್ನೆರಡು ದಿನಗಳಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಜತೆಗೆ ಸಾರಿಗೆ ಕಚೇರಿಗೆ ಹೊಂದಿಕೊಂಡಿರುವ ಬ್ರೋಕರ್ ಅಂಗಡಿಗಳನ್ನು ಅನತಿ ದೂರಕ್ಕೆ ವರ್ಗಾಯಿಸಬೇಕು. ತಪ್ಪಿದಲ್ಲಿ ಸಾರಿಗೆ ಮಂತ್ರಿ ನಿವಾಸದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಬಳಿಕ ಉಪವಿಭಾಗಾದಿಕಾರಿ ಕಚೇರಿ ಸಿಬ್ಬಂದಿಗೆ ಮನವಿ ಪತ್ರ ನೀಡಲಾಯಿತು.

ಪ್ರತಿಭಟನಾಕಾರರು ಸಾರಿಗೆ ಕಚೇರಿಯಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಹಳೇ ಬಸ್ ನಿಲ್ದಾಣದ ಎದುರು ಮಾನವ ಸರಪಳಿ ರಚಿಸಿದರು. ಈ ವೇಳೆ ರಕ್ಷಣಾ ವೇದಿಕೆ ಅಧ್ಯಕ್ಷ ಸಾಗರ್ ಜಾನೇಕೆರೆ, ಮಂಜುದೇವ್, ಗೋಕುಲ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net