ಪಾ.ಮಲ್ಲೇಶ ವಿರುದ್ಧ ಕ್ರಮಕ್ಕೆ ಆಗ್ರಹ

VJP-17-4
ವಿಜಯಪುರ ಜಿಲ್ಲಾಡಳಿತ ಕಚೇರಿ ಎದುರು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಮುಕುಂದ ಕುಲಕರ್ಣಿ, ಪ್ರಶಾಂತ ದೇಶಪಾಂಡೆ ಮತ್ತಿತರರಿದ್ದರು.
Published on

ವಿಜಯಪುರ: ಬ್ರಾಹ್ಮಣರ ವಿರುದ್ದ ವಿವಾದಾತ್ಮಕ ಹೇಳಿಕೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತಕಾರ್ಯದರ್ಶಿ ಪಾ.ಮಲ್ಲೇಶ ಬಹಿರಂಗ ಕ್ಷಮೆಗೆ ಆಗ್ರಹಿಸಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ (ರಿ) ದಿಂದ ಗುರುವಾರ ಪ್ರತಿಭಟನೆ ನಡೆದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಜಿಲ್ಲಾಧ್ಯಕ್ಷ ಮುಕುಂದ ಕುಲಕರ್ಣಿ ಮಾತನಾಡಿ, ಬ್ರಾಹ್ಮಣ ಸಮಾಜದವರು ಎಲ್ಲರೊಂದಿಗೆ ಸಮಾನವಾಗಿ ಬೆರೆತು ಒಂದಾಗಿರುತ್ತಾರೆ. ಈ ಸಮಾಜದ ವಿರುದ್ಧ ವಿವಾದಾತ್ಮಕ ಹೇಳಿಕೆ ಕೇಳಿಬರುತ್ತಿರುವುದು ಖಂಡನೀಯ ಎಂದರು.

ಸಂಘದ ಅಧ್ಯಕ್ಷ ಪ್ರಶಾಂತ ದೇಶಪಾಂಡೆ ಮಾತನಾಡಿ, ವಸುಧೈವಂ ಕುಟುಂಬಕಮ್ ಎನ್ನುವ ಹಾಗೆ ಬ್ರಾಹ್ಮಣರು ಯಾರ ತಂಟೆಗೂ ಹೋಗದೆ ತಮ್ಮ ಪಾಡಿಗೆ ತಾವು ಇರುತ್ತಾರೆ. ಇಂತಹ ಸೌಮ್ಯವಾದಿಗಳಾದ ಬ್ರಾಹ್ಮಣರ ವಿರುದ್ಧ ಹಾಗೂ ವೇದ- ಉಪನಿಷತ್ ಕುರಿತು ಪಾ.ಮಲ್ಲೇಶ ವಿವಾದಾತ್ಮಕ ಹೇಳಿಕೆ ನೀಡಿರುವುದು ಖಂಡನೀಯ ಎಂದರು.

ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಶಂಕರ ಕುಲಕರ್ಣಿ, ಶ್ರೀರಂಗ ಪುರಾಣಿಕ, ಕೃಷ್ಣ ಕುಲಕರ್ಣಿ, ವೆಂಕಟೇಶ ಗುಡಿ, ವಾರೀಶ ಕುಲಕರ್ಣಿ, ಆನಂದ ಕುಲಕರ್ಣಿ, ಅರವಿಂದ ಜೋಶಿ, ಗೋವಿಂದ ದೇಶಪಾಂಡೆ, ವಾದಿರಾಜ ರಘುವೀರ, ವಿಶ್ವನಾಥ ಕುಲಕರ್ಣಿ, ವಿಜ್ಞಾನೇಶ್ವರ ಕುಲಕರ್ಣಿ, ಮೋಹನ ಕುಲಕರ್ಣಿ, ಸಚಿನ ಪಡ್ನೀಸ್, ರಮೇಶ ಕುಲಕರ್ಣಿ, ಅಮಿತಾ ದೇಸಾಯಿ, ಲಕ್ಷ್ಮೀ ಕುಲಕರ್ಣಿ, ವೀಣಾ ಸಾವಳಗಿ, ಅನಿತಾ ಪದಕಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net